ಚಿತ್ರದುರ್ಗ: ಗಣೇಶೋತ್ಸವ ಅಂಗವಾಗಿ ಚಿತ್ರದುರ್ಗ ತಾಲೂಕಿನ ತುರುವನೂರು ಗ್ರಾಮದಲ್ಲಿ ಚತುರ್ಮುಖ ಯುವಕ ಸಂಘದಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
ನಾಯಕನಹಟ್ಟಿಯ ಹಿರೇಕೆರೆಯಲ್ಲಿ ಸ್ವಾಮಿಯ ಮೂರ್ತಿಯನ್ನು ಶಾಸ್ತ್ರೋಕ್ತವಾಗಿ ವಿಸರ್ಜಿಸಲಾಯಿತು ಎಂದು ಸಂಘದ ಶಿವು, ಮುನಿಯಪ್ಪ ತಿಳಿಸಿದ್ದಾರೆ.