ಗಣೇಶ ಮಂಡಳಿಗಳಿಗೆ ಸಲಹೆ

23kdl2
Published on

ಕುಂದಗೋಳ: ತಾಲೂಕಿನಾದ್ಯಂತ ಗಣೇಶ ಪ್ರತಿಷ್ಠಾಪನೆ ಸ್ಥಳಗಳಿಗೆ ಡಿವೈಎಸ್ಪಿ ರವಿ ನಾಯಕ ಭೇಟಿ ನೀಡಿ ಗಣೇಶ ಮಂಡಳಿಗಳ ಸದಸ್ಯರಿಗೆ ಹಲವು ಸೂಚನೆ ನೀಡಿದರು. ಗಣೇಶ ವಿಸರ್ಜನೆವರೆಗೂ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸರಳವಾಗಿ ಹಬ್ಬ ಆಚರಣೆ ಮಾಡಬೇಕು. ಸಾರ್ವಜನಿಕರು ಹೆಚ್ಚಾಗಿ ಜನ ಗುಂಪು ಗುಂಪಾಗಿ ಸೇರಬಾರದು ಸಮಾಜದ ಅಂತರ ಕಾಯ್ದುಕೊಳ್ಳಬೇಕು. ಗಣೇಶನ ವಿಸರ್ಜನೆ ಮೆರವಣಿಗೆಗೆ ಅವಕಾಶವಿಲ್ಲ ಎಂದು ತಿಳಿಸಿದರು. ಸಿಪಿಐ ಬಸವರಾಜ ಕಲ್ಲಮ್ಮನವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net