ಗಣೇಶ ಚತುರ್ಥಿಗೆ ಯಶವಂತಪುರ - ಮುರ್ಡೇಶ್ವರ ನಡುವೆ ವಿಶೇಷ ರೈಲು

murdeshwar train
Published on

ಮಂಗಳೂರು: ಗಣೇಶ ಚತುರ್ಥಿಯ ಸಂದರ್ಭ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು ಯಶವಂತಪುರ ಮತ್ತು ಮುರ್ಡೇಶ್ವರ ನಡುವೆ ಸೆ.15 ಮತ್ತು 16 ರಂದು ವಿಶೇಷ ರೈಲು ಓಡಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.
ಯಶವಂತಪುರ - ಮುರ್ಡೇಶ್ವರ ವಿಶೇಷ ರೈಲು (06587) ಸೆಪ್ಟಂಬರ್ 15 ರಂದು ಶುಕ್ರವಾರ ರಾತ್ರಿ 11.55 ಕ್ಕೆ ಯಶವಂತಪುರದಿಂದ ಹೊರಡಲಿದ್ದು, ಮರುದಿನ ಸೆಪ್ಟಂಬರ್ 16 ರಂದು ಮಧ್ಯಾಹ್ನ 12.55 ಕ್ಕೆ ಮುರ್ಡೇಶ್ವರ ತಲುಪುವುದು.
ಮುರ್ಡೇಶ್ವರ-ಯಶವಂತಪುರ ವಿಶೇಷ ರೈಲು (06588 ) ಸೆಪ್ಟೆಂಬರ್ 16 ರಂದು ಮಧ್ಯಾಹ್ನ 1.30 ಕ್ಕೆ ಮುರ್ಡೇಶ್ವರದಿಂದ ಹೊರಟು ಮರುದಿನ ಬೆಳಗ್ಗೆ 4 ಕ್ಕೆ ಯಶವಂತಪುರ ತಲುಪುತ್ತದೆ. ವಿಶೇಷ ರೈಲುಗಳು ಒಂದು ಎಸಿ ಫಸ್ಟ್ ಕ್ಲಾಸ್, ಎರಡು ಎಸಿ-2 ಟೈರ್, ಏಳು ಎಸಿ-3 ಟೈರ್, ಎಂಟು ಸ್ಲೀಪರ್ ಕ್ಲಾಸ್, ಎರಡು ಲಗೇಜ್-ಕಮ್-ಬ್ರೇಕ್ ವ್ಯಾನ್ ಕೋಚ್‌ಗಳ ಕೋಚ್ ಸಂಯೋಜನೆಯನ್ನು ಹೊಂದಿರುತ್ತದೆ ಎಂದು ಎಸ್‌ಡಬ್ಲ್ಯುಆರ್ ಮುಖ್ಯ ಪಿಆರ್‌ಒ ಅನೀಶ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net