ಗಣಿತ ಕಬ್ಬಿಣದ ಕಡಲೆ ಅಲ್ಲ

ydg01
Published on

ಕೊಡೇಕಲ್: ಗಣಿತ ವಿಷಯ ಕಬ್ಬಿಣದ ಕಡಲೆ ಅಲ್ಲ. ಅದನ್ನು ನಿರಂತರ ಅಭ್ಯಾಸ ಮಾಡಿಕೊಂಡರೆ ಮಾತ್ರ ಸುಲಭವಾಗಿ ಅರ್ಥೈಸಿಕೊಳ್ಳಲು ಸಾಧ್ಯ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರೇಮಾ ರಾಠೋಡ ಹೇಳಿದರು.

ಬರದೇವನಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಪಂ, ಶಾಲಾ ಸಾಕ್ಷರತಾ ಇಲಾಖೆ ಹಾಗೂ ಅಕ್ಷರ ಫೌಂಡೇಷನ್ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡ ಗಣಿತ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು.

ಯಾವುದೇ ವಿಷಯವನ್ನಾದರೂ ಕಲಿಯಬೇಕೆನ್ನುವ ಆಸಕ್ತಿ, ಮನಸ್ಸು ವಿದ್ಯಾರ್ಥಿಗಳಲ್ಲಿದ್ದರೆ ಯಾವುದೇ ವಿಷಯ ಸುಲಭವಾಗಿ ಕಲಿಯಬಹುದಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಮಯ ಅಭ್ಯಾಸದ ಕಡೆಗೆ ಮೀಸಲಿಡಬೇಕು. ಸರ್ಕಾರದಿಂದ ಹಲವು ಯೋಜನೆಗಳು ಮಕ್ಕಳಿಗೆ ಸಿಗುತ್ತಿದ್ದು ಅವುಗಳ ಲಾಭ ಪಡೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಮುಖ್ಯಗುರು ಮುತ್ತಣ್ಣ ಆಶ್ಯಾಳ ಮಾತನಾಡಿ, ಗ್ರಾಮ ಪಂಚಾಯಿತಿಯಿAದ ಹಮ್ಮಿಕೊಂಡ ಗಣಿತ ಸ್ಪರ್ಧೆ ಮಕ್ಕಳಲ್ಲಿ ಹೊಸ ಚೈತನ್ಯ ತಂದಿದೆ ಎಂದು ಹೇಳಿದರು. ಈ ವೇಳೆ ವಿಜೇತ ಮಕ್ಕಳಿಗೆ ಪ್ರಶಸ್ತಿಪತ್ರ ಹಾಗೂ ಬಹುಮಾನ ವಿತರಿಸಲಾಯಿತು.

ಅಧ್ಯಕ್ಷ ಮಾಳಪ್ಪ ಢವಳಗಿ, ಭೀಮಣ್ಣ ಹೂಗಾರ, ಅಮೃತರಾವ ದೇಸಾಯಿ, ಸ್ವಯಂ ಸೇವಕರಾದ ಶ್ರೀದೇವಿ ಹಡಗಿನಾಳ, ಬಸಪ್ಪ ಮದರಿ, ಹಳ್ಳೆಪ್ಪ, ಬಸವರಾಜ, ಹಣಮಂತ್ರಾಯ, ನಿಂಗಣ್ಣ ಇತರರಿದ್ದರು. ಶಿಕ್ಷಕ ಮಲ್ಲಿಕಾರ್ಜುನ ಸ್ವಾಗತಿಸಿ ವಂದಿಸಿದರು. ಎಸ್.ಎನ್.ನಂದಿಕೋಲಮಠ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net