ಗಣಿತ, ಕಂಪ್ಯೂಟಿoಗ್‌ನಲ್ಲಿ ಬಿ.ಟೆಕ್ ಕೋರ್ಸ್

cuk
Published on

ಕಲಬುರಗಿ: ಗಣಿತ ಮತ್ತು ಕಂಪ್ಯೂಟಿAಗ್‌ನಲ್ಲಿ ಬಿ.ಟೆಕ್ ಅತ್ಯಂತ ವಿಶೇಷ ಕೋರ್ಸ್ ಆಗಿದ್ದು, ದೇಶದಲ್ಲಿ ಬೆರಳೆಣಿಕೆಯ ಸಂಸ್ಥೆಗಳಿAದ ಮಾತ್ರ ನೀಡಲಾಗುತ್ತದೆ. ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ(ಸಿಯುಕೆ) ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಈ ಕೋರ್ಸ್ಗಳನ್ನು ಆರಂಭಿಸುತ್ತಿದೆ ಎಂದು ವಿವಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.

ಆಳಂದ ತಾಲೂಕಿನ ಕಡಗಂಚಿ ಹತ್ತಿರದ ವಿವಿಯ ಗುರುವಾರ ಈ ಕೋರ್ಸ್ನ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಪದವಿ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿ ಉದ್ಯೋಗ ಅಥವಾ ಉನ್ನತ ಕಲಿಕೆಯ ಅವಕಾಶಗಳೊಂದಿಗೆ ಇಲ್ಲಿಂದ ಹೊರಗೆ ಹೋಗುವಂತೆ ಮಾಡುವುದೇ ನಮ್ಮ ಗುರಿ. ವಿದ್ಯಾರ್ಥಿಗಳ ನಿರೀಕ್ಷೆ ಪೂರೈಸಲು ಅಗತ್ಯ ಮೂಲಸೌಕರ್ಯ ಮತ್ತು ಅರ್ಹ ಶಿಕ್ಷಕರನ್ನು ಒದಗಿಸಲು ನಾವು ಬದ್ಧರಾಗಿz್ದÉÃವೆ. ಇಂಜಿನಿಯರಿAಗ್ ಮತ್ತು ಗಣಿತ ತರಬೇತಿ ನೀಡಲು ಪ್ರಮುಖ ಸಂಸ್ಥೆಗಳ ತಜ್ಞರನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.

ಇದು ಬಹುಶಿಸ್ತೀಯ ಕೋರ್ಸ್ ಆಗಿದ್ದು, ಗಣಿತವಿಲ್ಲದೆ ನಾವು ಯಾವುದೇ ಪದವಿ ಊಹಿಸಲು ಸಾಧ್ಯವಿಲ್ಲ. ಎಐ, ಯಂತ್ರ ಕಲಿಕೆ, ಐಒಟಿ, ಬಿಗ್ ಡೇಟಾದ ಯುಗದಲ್ಲಿ ಇದರ ಪಾತ್ರ ಪ್ರಮುಖ ಎಂದರು.

ಪರೀಕ್ಷಾ ನಿಯಂತ್ರಕ ಕೋಟಾ ಸಾಯಿಕೃಷ್ಣ ಮಾತನಾಡಿ, ಎನ್‌ಟಿಎ-ಸಿಯುಇಟಿ (ಯುಜಿ) ಫಲಿತಾಂಶ ಪ್ರಕಟಿಸಲಾಗಿದೆ. ಸಿಯುಕೆ ನೋಂದಣಿ ಪ್ರಕ್ರಿಯೆ ಪ್ರಕಟಿಸಿದೆ. ಜು.೨೬ರಂದು ಮಧ್ಯಾಹ್ನ ೧೨ರೊಳಗೆ ನೋಂದಣಿ ಮಾಡಿಕೊಳ್ಳಬಹುದು. ನೋಂದಾಯಿತ ವಿದ್ಯಾರ್ಥಿಗಳ ಪಟ್ಟಿಯನ್ನು ಜು.೩೧ರಂದು ಬೆಳಗ್ಗೆ ೧೦ಕ್ಕೆ ವಿವಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಕುಂದುಕೊರತೆಗಳಿಗೆ ಹಾಜರಾಗಲು ಆ.೨ರಂದು ಬೆಳಗ್ಗೆ ೧೦ಕ್ಕೆ ಕೊನೇ ದಿನ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ವಿವಿ ವೆಬ್‌ಸೈಟ್ ನೋಡಬಹುದು ಎಂದರು.

ಗಣಿತಶಾಸ್ತç ವಿಭಾಗದ ಮುಖ್ಯಸ್ಥ, ಡಾ.ಜನಾರ್ದನ ರೆಡ್ಡಿ ಹೊಸ ಕೋರ್ಸ್ ಕುರಿತು ಮಾತನಾಡಿ, ಉದ್ಯಮದ ಅಗತ್ಯತೆ ಮತ್ತು ಐಐಟಿಗಳಲ್ಲಿನ ಉನ್ನತ ಶಿಕ್ಷಣದ ಅವಕಾಶ ಗಮನದಲ್ಲಿಟ್ಟುಕೊಂಡು ಈ ಕೋರ್ಸ್ ವಿನ್ಯಾಸಗೊಳಿಸಲಾಗಿದೆ. ಇದು ಭವಿಷ್ಯತ್ತಿನ ಕೋರ್ಸ್ ಆಗಿದ್ದು, ಕಂಪ್ಯೂರ‍್ಸ್ ಮೀರಿದ ಮುಂದಾಲೋಚನೆ ಕಂಪ್ಯೂಟಿAಗ್ ಹೊಂದಿದೆ. ಕೋರ್ಸ್ನಲ್ಲಿ ವಿಜ್ಞಾನ, ಇಂಜಿನಿಯರಿAಗ್, ಯಂತ್ರ ಕಲಿಕೆ, ಕಂಪ್ಯೂಟಿAಗ್, ಅಂಕಿಅAಶ ಮತ್ತು ಮೌಲ್ಯವರ್ಧಿತ ವಿಷಯ ಒಳಗೊಂಡಿವೆ. ಕ್ಯಾಂಪಸ್ ನೇಮಕ ಮತ್ತು ವಿದೇಶಿ ವಿವಿಗಳಲ್ಲಿ ಎಂಎಸ್ ಅಥವಾ ಪಿ.ಎಚ್‌ಡಿ ಪಡೆಯುವುದು ಮುಖ್ಯ ಉz್ದÉÃಶ ಎಂದರು.

ಭೌತಿಕ ವಿಜ್ಞಾನ ನಿಕಾಯದ ಡೀನ್ ಡಾ.ಭರತ್‌ಕುಮಾರ್, ಮಾಜಿ ಡೀನ್ ಡಾ.ದೀಪಕ್ ಸ್ಯಾಮ್ಯುವೆಲ್ ಮಾತನಾಡಿದರು. ಡಾ. ಶ್ರೀನಿವಾಸಲು ಬಳ್ಳೆಂ ಸ್ವಾಗತಿಸಿದರು, ಡಾ.ಎನ್.ಸಂದೀಪ್ ವಂದಿಸಿದರು. ಅಧ್ಯಾಪಕರಾದ ಡಾ.ರಂಗನಾಥ ಡಿ, ಡಾ.ದೇವಿಕಾ ದಾಬಕೆ, ಡಾ.ನವಾಜೋದ್ದೀನ್, ಡಾ.ಮೇಘಾ ಕಂಡೇಲ್ವಾಲ್, ಡಾ.ಲಕ್ಷಿö್ಮÃ ಕೆ.ಎಂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net