

ಚಿತ್ರದುರ್ಗ: ಜಿಲ್ಲೆಯಲ್ಲಿರುವ ಗಣಿ ಕಂಪನಿಗಳು ಸ್ಥಳೀಯರಿಗೆ ಉದ್ಯೋಗ ನೀಡುವ ಜತೆಗೆ ಗಣಿಬಾಧಿತ ಪ್ರದೇಶಾಭಿವೃದ್ಧಿಗೆ ಸಿಎಸ್‌ಆರ್ ನಿಧಿ ಖರ್ಚು ಮಾಡಬೇಕೆಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.
ಡಿಸಿ ಕಚೇರಿಯಲ್ಲಿ ಮಂಗಳವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಗಣಿ ಕಂಪನಿಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ 7 ಖಾಸಗಿ ಕಂಪನಿಗಳ ಸಿಎಸ್‌ಆರ್ ನಿಧಿ ಜಿಲ್ಲೆಯಲ್ಲೇ ಖರ್ಚಾಗಬೇಕು. ಗಣಿ ಕಂಪನಿಗಳು ತಮ್ಮ ವ್ಯಾಪ್ತಿಯ ಇತರೆ ರಾಜ್ಯಗಳಲ್ಲಿ ಖರ್ಚು ಮಾಡಿ, ಜಿಲ್ಲೆಯ ಲೆಕ್ಕಕ್ಕೆ ತೋರಿಸುತ್ತಿರುವುದು ಹಾಗೂ ಕಂಪನಿಗಳೇ ಎನ್‌ಜಿಒಗಳನ್ನು ಸೃಷ್ಟಿಸಿ ಹಣ ನೀಡುತ್ತಿರುವ ದೂರುಗಳಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಸ್ತೆಗಳು ಹಾಳಾಗಿವೆ, ಮೈನ್ಸ್ ಲಾರಿಗಳ ಸಂಚಾರದಿಂದ ಧೂಳಿಂದ ಬದುಕು ದುಸ್ತರವಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಕೆರೆಕಟ್ಟೆಗಳು ಕಲುಷಿತವಾಗುತ್ತಿವೆ. ಸ್ಥಳೀಯ ಸಂಪನ್ಮೂಲ ಬಳಸಿ ಜನರಿಗೆ ಅನಾನುಕೂಲ ಉಂಟು ಮಾಡುವುದನ್ನು ಸಹಿಸಲಾಗದು. ಈ ಹಿಂದಿನ ವರ್ಷಗಳಿಂದಲೂ ಸಿಎಸ್‌ಆರ್ ನಿಧಿ ಮೊತ್ತದ ಖರ್ಚು- ವಿವರ ಹಾಗೂ ಮುಂದೆ ಈ ನಿಧಿ ಖರ್ಚಿಗೆ ಕ್ರಿಯಾಯೋಜನೆ ಸಲ್ಲಿಸಿ ಜಿಲ್ಲಾಧಿಕಾರಿಯ ಅನುಮತಿ ಪಡೆಯಬೇಕೆಂದು ಕಂಪನಿಗಳ ಪ್ರತಿನಿಧಿಗಳಿಗೆ ತಾಕೀತು ಮಾಡಿದರು.
ಸೋಲಾರ್ ಪಾರ್ಕ್‌ನಿಂದ ಅಂದಾಜು 36 ಕೋಟಿ ರೂ. ಸಿ ಎಸ್‌ಆರ್ ನಿಧಿ ಬಾಕಿ ಇದೆ. ಸಿಎಸ್‌ಆರ್‌ಗೆ ಸಂಬಂಧಿಸಿದಂತೆ ಪ್ರತ್ಯೇಕ ಸ ಭೆ ನಡೆಸುವಂತೆ ಅಧಿಕ ಮಳೆಯಿಂದ ಹಾನಿಗೊಳಗಾದ ಚಿತ್ರದುರ್ಗ ತಾಲೂಕು ಓಬಣ್ಣನಹಳ್ಳಿಗೆ ವಿಶೇಷ ಪ್ಯಾಕೇಜ್ ಒದಗಿಸಲಾಗುವು ದು. ಈ ಗ್ರಾಮದ ಸುತ್ತ ಬೆಟ್ಟಗಳಿದ್ದು,ಅಲ್ಲಿಂದ ನೀರು ಹರಿದು ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ಆದ್ದರಿಂದ ಗ್ರಾಮದಲ್ಲಿ ಹೊಸ ಲೇ ಔಟ್ ನಿರ್ಮಾಣಕ್ಕೆ ಕ್ರಮ ವಹಿಸುವಂತೆ ಡಿಸಿಗೆ ಸೂಚಿಸಿದರು. ಗಣಿ ಕಂಪನಿಗಳು ಕೂಡ ವಿಶಾಲ ಮನಸ್ಸಿನಿಂದ ನೆರವಿಗೆ ಮುಂದಾಗ ಬೇ ಕೆಂದರು.
ಡಿಸಿ ಟಿ.ವೆಂಕಟೇಶ್ ಅವರು ಮಾತನಾಡಿ, ಸಿಎಸ್‌ಆರ್ ನಿಧಿಯನ್ನು ಸ್ಥಳೀಯ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹಾಗೂ ಪರಿಸರ ಸಂರಕ್ಷಣೆಗೆ ಖರ್ಚು ಮಾಡಬೇಕೆಂಬ ಸರ್ಕಾರದ ಸೂಚನೆ ಇದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಗಮನಕ್ಕೆ ತರುವಂತೆ ಡಿಸಿ ಸೂಚಿಸಿದರು. 157 ಹಳ್ಳಿಗಳ ಸೇರ್ಪಡೆ ಪ್ರಸ್ತಾವನೆ
ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಡಿಎಂಎಫ್ ಹಾಗೂ ಕೆಎಂಇಆರ್‌ಸಿ ನಿಧಿಯಡಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಇದಕ್ಕಾಗಿ 157 ಹಳ್ಳಿಗಳ ಪಟ್ಟಿ ಮಾಡಿ, ಗಣಿಬಾಧಿತ ಪ್ರದೇಶ ವ್ಯಾಪ್ತಿಗೆ ಸೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಿಸಿ ತಿಳಿಸಿದರು.
ಕೇಂದ್ರ ಸರ್ಕಾರ ಚಳ್ಳಕೆರೆಯಲ್ಲಿ ಏಕಲವ್ಯ ಶಾಲೆಯ ಮಂಜೂರಿಗೆ ಮುಂದಾಗಿದ್ದು, ಇದಕ್ಕಾಗಿ 15 ಎಕರೆ ಹಾಗೂ 15 ಕೋಟಿ ರೂ. ವೆಚ್ಚದಲ್ಲಿ ಚಿತ್ರದುರ್ಗದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆಗೆ 5 ಎಕರೆ ಜಮೀನು ಜಾಗ ಗುರುತಿಸುವಂತೆ ಡಿಸಿಗೆ ಸಂಸದರು ಸೂಚಿಸಿದರು.
ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಎಡಿಸಿ ಬಿ.ಟಿ.ಕುಮಾರಸ್ವಾಮಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಡಾ.ಎಂ.ಜೆ. ಮಹೇಶ್, ಡಿಸಿಎಫ್ ಟಿ.ರಾಜಣ್ಣ, ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ, ಡಿವೈಎಸ್‌ಪಿ ಪಿ.ಕೆ.ದಿನಕರ್, ಆರ್‌ಟಿಒ ಭರತ್‌ಎಂ.ಕಾಳಿಸಿಂಗೆ ಇತರರು ಇದ್ದರು.