ಗಣಪತಿಗೆ ಬೆಳ್ಳಿ ಕವಚ ಅರ್ಪಣೆ

11Kush001
Published on


ಕುಶಾಲನಗರ: ಕುಶಾಲನಗರದ ಗಣಪತಿ ದೇವಸ್ಥಾನಕ್ಕೆ ಬೆಂಗಳೂರಿನ ಎನ್.ಆರ್.ಕಾಲನಿ ನಿವಾಸಿ ವೈ.ಆರ್.ಪ್ರತಾಪ ಕುಟುಂಬಸ್ಥರು 3 ಲಕ್ಷ ಮೌಲ್ಯದ ಬೆಳ್ಳಿ ಕವಚವನ್ನು ಶನಿವಾರ ದೇವರಿಗೆ ಸಮರ್ಪಿಸಿದರು.


ಗಣಪತಿ ದೇವಸ್ಥಾನದಲ್ಲಿ ಶನಿವಾರ ವಿಶೇಷ ಹೋಮ ಹವನಗಳನ್ನು ನಡೆಸಿ ಬೆಳ್ಳಿ ಕವಚವನ್ನು ದೇವಸ್ಥಾನದ ಅಧ್ಯಕ್ಷ ವಿ.ಎನ್. ವಸಂತಕುಮಾರ್ ಮತ್ತು ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರ ಬಾಬು ಅವರಿಗೆ ಹಸ್ತಾಂತರ ಮಾಡಿದರು.

ದೇವಸ್ಥಾನ ಆಡಳಿತ ಮಂಡಳಿಯ ಉಪಾಧ್ಯಕ್ಷ ಎಂ.ಕೆ.ದಿನೇಶ್, ಅರ್ಚಕ ರಾಘವೇಂದ್ರ ಭಟ್, ಬೆಂಗಳೂರಿನ ಪ್ರತಾಪ ಕುಟುಂಬಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net