ಗಣಪತಿ ಪೆಂಡಾಲ್‌ನಲ್ಲಿ ಸಾಮೂಹಿಕ ವಿಷ್ಣು-ಲಲಿತ ಸಹಸ್ರನಾಮ

ಗಣಪತಿ ಪೆಂಡಾಲ್‌ನಲ್ಲಿ ಸಾಮೂಹಿಕ ವಿಷ್ಣು-ಲಲಿತ ಸಹಸ್ರನಾಮ
Published on

ಹಾಸನ: ನಗರ ಬಸ್ ನಿಲ್ದಾಣ ಪಕ್ಕದ ಗಣಪತಿ ಪೆಂಡಾಲ್‌ನಲ್ಲಿ 70ನೇ ವರ್ಷದ ಗಣೇಶೋತ್ಸವ ಅಂಗವಾಗಿ ಸೋಮವಾರ ವಿಷ್ಣು ಸಹಸ್ರನಾಮ ಮತ್ತು ಲಲಿತ ಸಹಸ್ರನಾಮ ಪಾರಾಯಣ ಹಮಿಕೊಳ್ಳಲಾಗಿತ್ತು.
ನಗರಸಭೆ ಮಾಜಿ ಅಧ್ಯಕ್ಷೆ ನೇತ್ರಾವತಿ ಗಿರೀಶ್ ಅವರು ಮಾತನಾಡಿ, ಪೆಂಡಾಲ್ ಗಣಪತಿ ಆವರಣದಲ್ಲಿ ನೂರಾರು ಮಹಿಳೆಯರಿಂದ ವಿಷ್ಣು ಮತ್ತು ಲಲಿತ ಸಹಸ್ರನಾಮ ಪಾರಾಯಣ ನಡೆದಿದೆ. ಇಂತಹ ಅವಕಾಶವನ್ನು ಗಣಪತಿ ಸೇವಾ ಸಮಿತಿ ಮಾಡಿಕೊಟ್ಟಿರುವುದಕ್ಕೆ ಧನ್ಯವಾದ ಸಲ್ಲಿಸುತ್ತೇವೆ ರಂದು ಹೇಳಿದರು.ನಗರದ ವಿವಿಧ ಭಜನಾ ಮಂಡಳಿ ಸದಸ್ಯರು ವಿಷ್ಣು ಸಹಸ್ರನಾಮ ಪಠಿಸಿದರು. ಮಹಾಮಂಗಳಾರತಿ ಹಾಗು ಪ್ರಸಾದ ವಿತರಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net