

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಕೆಲಗೇರಿಯ ಆಶೀರ್ವಾದ ಗಣಪತಿ ದೇವಸ್ಥಾನದ 33ನೇ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವ ಜ. 1ರಂದು ನಡೆಯಲಿದೆ. ಆಶೀರ್ವಾದ ಗಣಪತಿ ದೇವಸ್ಥಾನ ಸಮಿತಿಯಿಂದ ಬೆಳಗ್ಗೆಯಿಂದ ರಾತ್ರಿವರೆಗೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಬೆಳಗ್ಗೆ ಪಂಚಾಮೃತ ಅಭಿಷೇಕ, ಬೆಳ್ಳಿ ಕವಚ ಧಾರಣೆ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ದಾನಿಗಳನ್ನು ಹಾಗೂ ಭಕ್ತರನ್ನು ಗೌರವಿಸಲಾಗುವುದು ಎಂದು ದೇವಸ್ಥಾನ ಸಮಿತಿ ಪ್ರಕಟಣೆ ತಿಳಿಸಿದೆ.