ಗಣತಿಯಲ್ಲಿ ಮಾದಿಗ ಎಂದು ನಮೂದಿಸಿ

Published on

ಗುರುಮಾಠಕಲ್: ಪರಿಶಿಷ್ಟ ಜಾತಿಗಳ ಒಳ ಮೀಸಲಿಗಾಗಿ ಸೋಮವಾರದಿಂದ ಆರಂಭವಾದ ಜಾತಿ ಗಣತಿಯಲ್ಲಿ ಸಮುದಾಯದ ಜನರು ಕಡ್ಡಾಯವಾಗಿ ಮಾದಿಗ ಕಲಂ ೬೧ರಲ್ಲಿ ನಮೂದಿಸಬೇಕು ಎಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಉಪಾಧ್ಯಕ್ಷ ಆಶನ್ನ ಬುದ್ಧ ಹೇಳಿದರು. ಪಟ್ಟಣದ ಪ್ರವಾಸಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂದಕೃಷ್ಣ ಮಾದಿಗ ನೇತೃತ್ವದಲ್ಲಿ ಕಳೆದ ೩೦ ವರ್ಷಗಳಿಂದ ನಡೆಸಿದ ಹೋರಾಟದ ಫಲವಾಗಿ ಒಳಮೀಸಲು ಜಾತಿ ಸಮೀಕ್ಷೆಗೆ ಸುಪ್ರಿಂಕೋರ್ಟ್ ತೀರ್ಪಿನ ಮೇರೆಗೆ ಈಗ ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ ಆದಿ ದ್ರಾವಿಡ, ಆದಿ ಕರ್ನಾಟಕ, ಹರಿಜನ, ಎಸ್ಸಿ ಎಂದೆಲ್ಲ ಬರೆಸದೇ ಕೇವಲ ಮಾದಿಗ ಮಾತ್ರ ಎಂದು ನಮೂದಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ತಾಲೂಕು ಅಧ್ಯಕ್ಷ ರವಿ ಬುರನೋಳ್, ಬಾಬು ಜಗಜೀವನ್ ರಾಮ್ ಅಧ್ಯಕ್ಷ ಭೀಮಶಪ್ಪ ಕೆಳಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net