ಗಣತಿ ಆರ್ಥಿಕ ಸ್ಥಿತಿ ಅರಿಯಲಿ

Dayanand Agasar (1)
Published on

ಕಲಬುರಗಿ: ಕೇಂದ್ರ ಹಾಗೂ ರಾಜ್ಯ ರ‍್ಕಾಗಳು ಮುಂದಿನ ದಿನಗಳಲ್ಲಿ ನಡೆಸುವ ಜನ ಗಣತಿ ಹಾಗೂ ಜಾತಿ ಗಣತಿಯಲ್ಲಿ ಜನರ ರ‍್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಗಣತಿ ನಡೆಸಬೇಕು ಎಂದು ಜನ ಕಲ್ಯಾಣ ವೇದಿಕೆ ಸಂಸ್ಥಾಪಕ, ಗುಲ್ರ‍್ಗ ವಿವಿ ವಿಶ್ರಾಂತ ಕುಲಪತಿ ಪ್ರೊ.ದಯಾನಂದ ಅಗಸರ ಆಗ್ರಹಿಸಿದರು.

ಸ್ವಾತಂತ್ರಕ್ಕೂ ಮುನ್ನ ೧೯೩೧ರಲ್ಲಿ ದೇಶದಲ್ಲಿ ಜಾತಿ ಗಣತಿ ಮಾಡಲಾಗಿದೆ. ನಂತರ ಹಲವು ವರದಿ ನೋಡಿ ಪ್ರಸ್ತುತ ಮೀಸಲಾತಿ ಹಂಚಲಾಗಿದೆ. ಇದರಿಂದ ಹಿಂದುಳಿದ ರ‍್ಗ ಸೇರಿ ಎಲ್ಲೆಡೆ ಕೆಲವರು ರ‍್ಥಿಕವಾಗಿ ಸಬಲರಾಗಿದ್ದಾರೆ. ಇದರೊಂದಿಗೆ ಬಹುಪಾಲು ಜನರ ರ‍್ಥಿಕ ಸ್ಥಿತಿ ಕೆಳ ಮಟ್ಟದಲ್ಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾಮಾಜಿಕ, ಶೈಕ್ಷಣಿಕ ಸಮಾನತೆ ಬರಬೇಕು ಎಂಬುದು ಹಲವರ ಆಶಯ. ಆದರೆ, ಪ್ರಮುಖವಾಗಿ ರ‍್ಥಿಕ ಸಮಾನತೆ ಅವಶ್ಯವಿದೆ. ಒಂದು ಬಾರಿ ವ್ಯಕ್ತಿ ರ‍್ಥಿಕ ಸಮಾನತೆ ಸಾಧಿಸಿದರೆ ಉಳಿದ ಕಡೆ ಸಮಾನತೆ ದೊರೆಯುತ್ತದೆ. ಜಾತಿ ಆಧಾರಿತ ಮೀಸಲಾತಿಯಿಂದ ರ‍್ಕಾರಗಳ ಸೌಲಭ್ಯ ಪಡೆಯಲಾಗುತ್ತಿದೆ. ಅದು ಒಂದು ಕಡೆ ಮಾತ್ರ ಹರೆಯುತ್ತಿದೆ. ಇದರಿಂದ ಹಿಂದುಳಿದ, ದಲಿತ, ಆದಿವಾಸಿಗಳ ತಳಮಟ್ಟದವರೆಗೆ ಸೌಲಭ್ಯ ಮುಟ್ಟದಿರುವುದು ಕಂಡು ಬರುತ್ತಿದೆ ಎಂದು ಹೇಳಿದರು.

ರ‍್ಥಿಕ ಸಮೀಕ್ಷೆ ನಡೆದರೆ ರ‍್ಥಿಕ ಮಟ್ಟ ನೋಡಿ ರ‍್ಕಾರ ಸೌಲಭ್ಯ ನೀಡಿ, ಸಮಾನತೆ ಕಲ್ಪಿಸಬಹುದು. ಇದರಿಂದ ಸೌಲಭ್ಯದಿಂದ ಬೆಳೆದವರಿಗೆ ಮತ್ತೊಮ್ಮೆ ರ‍್ಕಾರದ ಸೌಲಭ್ಯ ದೊರೆಯುವುದು ನಿಲ್ಲುತ್ತದೆ. ಕಡು ಬಡವರು ಹಾಗೂ ಬಡವರು ರ‍್ಥಿಕ ಚೈತನ್ಯ ಪಡೆಯಬಹುದು ಎಂದರು.

ಈ ಕುರಿತು ರ‍್ಚೆ ನಡೆಸಲು ವಿವಿಧ ಕ್ಷೇತ್ರಗಳಲ್ಲಿ ಸಾಮಾಜಿಕವಾಗಿ ತೊಡಗಿಸಿಕೊಂಡ ಪ್ರಮುಖರ ಸಭೆ ಮೇ ೧೦, ಜೂ.೨೮, ಮತ್ತು ಜು.೪ ರಂದು ಹಿಂದಿ ಪ್ರಚಾರ ಸಭಾ ಭವನದಲ್ಲಿ ನಡೆಸಲಾಗಿದೆ. ಹೋರಾಟ ರೂಪಿಸಲು ನರ‍್ವಹಣೆ ಮಂಡಳಿ, ಸಮಾಲೋಚನಾ ಮಂಡಳಿಗಳನ್ನು ರಚಿಸಲಾಗಿದೆ. ವೇದಿಕೆ ಸಭೆಗಳಲ್ಲಿ ರ‍್ನಿಣಯಿಸಿದಂತೆ ಮುಂದಿನ ದಿನಗಳಲ್ಲಿ ರ‍್ಕಾರಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಪ್ರಮುಖರಾದ ಎಂ.ಎಸ್​.ಪಾಟೀಲ್​ ನರಿಬೋಳ, ದಯಾನಂದ ಪಾಟೀಲ್​, ಅಶೋಕ ಗುರೂಜಿ, ಶಿವಶರಣಪ್ಪ ಹಾಲೋಳಿ, ಶಾದಾಬ್​ ಾತಿಮಾ, ಕೈಲಾಶನಾಥ ದೀಕ್ಷಿತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net