

ಚಿಕ್ಕೋಡಿ, ಬೆಳಗಾವಿ: ಕನ್ನಡ ಬಳಸಿದರೆ, ಕನ್ನಡ ಭಾಷೆ ಬೆಳೆಯುತ್ತದೆ ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಹೇಳಿದರು. ಇಲ್ಲಿನ ಕ್ರೀಡಾಂಗಣದಲ್ಲಿ ತಾಲೂಕಾಡಳಿತದಿಂದ ಮಂಗಳವಾರ ಆಯೋಜಿಸಿದ್ದ 67ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ರಾಜ್ಯೋತ್ಸವ ಮೆರವಣಿಗೆಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಚಾಲನೆ ನೀಡಿದರು. ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಉಪಾಧ್ಯಕ್ಷ ಸಂಜಯ ಕವಟಗಿಮಠ ಇತರರಿದ್ದರು. ಇಲ್ಲಿನ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ.ವಿಠ್ಠಲ ಶಿಂಧೆ, ಡಾ.ರೇಣುಕಾ ಹುಂಡೆಕರ, ಡಾ.ವಿದ್ಯಾ ಪಾಟೀಲ, ಡಾ.ರಾಜಕುಮಾರ ಮನಗುತ್ತಿ, ರಾಜು ದತ್ತವಾಡೆ ಇತರರಿದ್ದರು.
ಪಟ್ಟಣದ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ಬಳಗದಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ನಿವೃತ್ತ ಪ್ರಾಚಾರ್ಯ ಡಾ. ಬಸವರಾಜ ಜಗಜಂಪಿ, ಪ್ರಾಚಾರ್ಯ ಡಾ. ಪ್ರಸಾದ ರಾಂಪೂರೆ, ಡಾ. ಎಂ.ಟಿ.ಕುರಣಿ, ಎಂ.ಡಿ.ಅಲಾಸೆ, ಸುಮೇಧಾ ಸದಾಶಿವ, ಓಂಕಾರ ದಿವಟೆ, ಶಿವಾನಂದ ವಿಭೂತೆ ಇತರರಿದ್ದರು.
ಬಸ್ ನಿಲ್ದಾಣದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪುರಸಭೆಯಿಂದ ರಾಜ್ಯೋತ್ಸವ ಆಚರಿಸಲಾಯಿತು. ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಪರಿಸರ ಅಧಿಕಾರಿ ವಿ.ರಮೇಶ, ಚಿಕ್ಕೋಡಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಾಂಭವಿ ಅಶ್ವತ್ಥಪುರ, ಘಟಕ ವ್ಯವಸ್ಥಾಪಕ ಆರ್.ಜಿ.ನಾಡಗೌಡ, ವಿಶ್ವನಾಥ ಕಾಮಗೌಡ ಇತರರಿದ್ದರು.
ಅಥಣಿ ಗ್ರಾಮೀಣ ವರದಿ: ತಾಲೂಕಿನ ಕೊಕಟನೂರ ಗ್ರಾಪಂ ಹಾಗೂ ಸರ್ಕಾರಿ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ನಾನಾಸಾಬ ವೀರಗೌಡ ಅಧ್ಯಕ್ಷತೆ ವಹಿಸಿದರು. ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ, ಪ್ರಾಚಾರ್ಯ ಅನಿಲ ಮೇಲಿನಕೇರಿ, ಮುರೇಪ್ಪ ಬಣಜ, ಅನಿಲ ಮುಳಿಕ, ಎಸ್.ಎಂ.ಸನದಿ, ಮಹೇಶ ಕಾಡದೇವರಮಠ ಇತರರಿದ್ದರು.
ಯಕ್ಸಂಬಾ ವರದಿ: ರಾಜ್ಯೋತ್ಸವದ ನಿಮಿತ್ತ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಜೊಲ್ಲೆ ಗ್ರುಪ್ ಸಿಇಒ ನಿವೃತ್ತ ಲೆಫ್ಟಿನೆಂಟ್ ಕಮಾಂಡರ್ ಡಾ. ವಿವೇಕಾನಂದ ಬಂಕೊಳ್ಳಿ ಧ್ವಜಾರೋಹಣ ನೆರವೇರಿಸಿದರು. ಆಶಾಜ್ಯೋತಿ ವಿಶೇಷ ಮಕ್ಕಳ ವಸತಿ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ವಿ.ಬಿ.ಖೋತ, ಫೈಮೀದಾ ದಾಡಿವಾಲೆ, ಲತಾ ವಾಳಕೆ, ಮಹಾದೇವಿ ಹುದ್ದಾರ ಇತರರಿದ್ದರು.
ಹುಕ್ಕೇರಿ ವರದಿ: ಇಲ್ಲಿನ ಎಸ್.ಕೆ ಹೈಸ್ಕೂಲ್ ಮೈದಾನದಲ್ಲಿ ತಾಲೂಕು ಆಡಳಿತದಿಂದ 67ನೇ ರಾಜ್ಯೋತ್ಸವ ಆಚರಿಸಲಾಯಿತು. ತಹಸೀಲ್ದಾರ್ ಡಾ. ಡಿ.ಎಚ್.ಹೂಗಾರ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಕಾಶ ಅವಲಕ್ಕಿ, ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ, ಉಪಾಧ್ಯಕ್ಷ ಆನಂದ ಗಂಧ, ಉದಯ ಹುಕ್ಕೇರಿ, ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಚೇರ್ಮನ್ ಮಹಾವೀರ ನಿಲಜಗಿ, ಎಂ.ಬಿ.ನಾಯಿಕ, ಕಬೀರ್ ಮಲೀಕ್, ನಂಜುಂಡಪ್ಪ, ಮಹಾಂತೇಶ ಸಜ್ಜನ ಇತರರಿದ್ದರು.
ಬೋರಗಾಂವ ವರದಿ: ಇಲ್ಲಿನ ಪಪಂ ಕಾರ್ಯಾಲಯದಲ್ಲಿ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪಿಕೆಪಿಎಸ್ ಅಧ್ಯಕ್ಷ ಉತ್ತಮ ಪಾಟೀಲ ಪೂಜೆ ಸಲ್ಲಿಸಿದರು. ಅರಿಹಂತ ಸಂಸ್ಥೆ, ಪಿಕೆಪಿಎಸ್, ಅರಿಹಂತ ಡೈರಿ, ಜವಳಿ ಗಿರಣಿ, ಸರ್ಕಾರಿ ಶಾಲೆ, ಸರ್ಕಾರಿ ಆಸ್ಪತ್ರೆ, ಸಂಘ ಸಂಸ್ಥೆಗಳಲ್ಲಿ ರಾಜ್ಯೋತ್ಸವ ಆಚರಿಸಲಾಯಿತು. ಪಿ.ಎ.ಕಲ್ಯಾಣಶೆಟ್ಟಿ, ಅಭಯಕುಮಾರ ಮಗದುಮ್ಮ, ಮಾಣಿಕ ಕುಂಬಾರ, ತುಳಸಿದಾಸ ವಸವಾಡೆ, ರೋಹಿತ ಪಾಟೀಲ, ದಿಗಂಬರ ಕಾಂಬಳೆ, ಪಿಂಟು ಕಾಂಬಳೆ ಇತರರಿದ್ದರು.
ತೆಲಸಂಗ ವರದಿ: ಇಲ್ಲಿನ ಜ್ಞಾನ ಭಾರತಿ ಶಾಲೆಯಲ್ಲಿ ಮಂಗಳವಾರ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಜ್ಞಾನ ಭಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಈಶ್ವರ ಉಂಡೋಡಿ, ಗ್ರಾಪಂ ಅಧ್ಯಕ್ಷ ವಿಲಾಸ ಮೋರೆ, ಡಾ. ಬಿ.ಎಸ್.ಕಾಮನ್, ಸಿದ್ದಲಿಂಗ ಮಾದರ, ಲತಾ ಶೆಲ್ಲೆಪ್ಪಗೋಳ, ಮುಖ್ಯ ಶಿಕ್ಷಕ ಗಫೂರ್ ಮುಲ್ಲಾ, ರವಿ ನಿಡೋಣಿ ಇತರರಿದ್ದರು. ಗ್ರಾಮದ ಬಿ.ವಿ ಸಂಘದ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಚಾರ್ಯ ಡಿ.ಎಂ.ಘೋರ್ಪಡೆ ಭುವನೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದರು.
ಡಾ. ಆರ್.ಡಿ.ಪೂಜಾರಿ, ಮಲ್ಲಿಕಾರ್ಜುನ ಹತ್ತಿ, ಬಿ.ಎನ್.ಅವಟಿ, ಬಿ.ಗಿ.ಸಾರ್ವಾಡ, ಶ್ರೀಕಾಂತ ಅರ್ದಾವೂರ ಇತರರಿದ್ದರು.
ನಾಗರಮುನ್ನೋಳಿ ವರದಿ: ಇಲ್ಲಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಎಂ.ಕೆ.ಖೋತ ನಾಡದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಿದ್ದಪ್ಪ ಮರ‌್ಯಾಯಿ, ಎಂ.ಬಿ.ಆಲೂರೆ, ರಮೇಶ ಕಾಳನ್ನವರ, ಲಕ್ಷ್ಮೀಸಾಗರ ಈಟಿ, ಬಸವರಾಜ ಮನಗೂಳಿ, ಶಿವಾನಂದ ಮರ‌್ಯಾಯಿ, ಮೀರಾಸಾಬ್ ಮುಲ್ತಾನಿ ಇತರರಿದ್ದರು.
ಕಬ್ಬೂರ ವರದಿ: ಸಮೀಪದ ಜಾಗನೂರ ಗ್ರಾಪಂನಲ್ಲಿ ಮಂಗಳವಾರ 67ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಗ್ರಾಪಂ ಅಧ್ಯಕ್ಷ ಶಿವರಾಯಿ ಸನದಿ ಪೂಜೆ ಸಲ್ಲಿಸಿದರು. ಉಪಾಧ್ಯಕ್ಷ ಲಕ್ಷ್ಮಣ ಹನುಮನ್ನವರ, ಬೀರಸಿದ್ದ ಪೂಜೇರಿ, ಮಹಾಂತೇಶ ಶಿರಗೂರ, ರಬಸಿದ್ದ ವಡೇರಹಟ್ಟಿ, ಬಾಳೇಸ ಪಾಂಡ್ರಿ, ಸಂತೋಷ ಚೌಲಗೇರ ಇತರರಿದ್ದರು.
ಅರಟಾಳ ವರದಿ: ಇಲ್ಲಿನ ಗ್ರಾಪಂ ಕಾರ್ಯಾಲಯದಲ್ಲಿ ಮಂಗಳವಾರ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಎ.ಜಿ.ಎಡಕೆ, ಸರಸ್ವತಿ ಕಾಂಬಳೆ, ಆನಂದ ಗಿರಿಜಾಗೋಳ, ಎಸ್.ಎಸ್.ಜನಾಯಿ, ಪಿ.ಎಸ್.ಮಸಳಿ, ಎಂ.ಡಿ.ಚಮಕೇರಿ ಇತರರಿದ್ದರು. ಸಮೀಪದ ಬಾಡಗಿ ಗ್ರಾಮದಲ್ಲಿ ರಾಜ್ಯೋತ್ಸವ ಆಚರಿಸಲಾಯಿತು. ಬಿ.ಆರ್.ಡಂಗಿ, ಸುರೇಶ ಮಮದಾಪುರ, ರಾಮು ತೇಲಿ, ರವೀಂದ್ರ ಬಿರಾದಾರ, ಸುರೇಶ ಹುನ್ನೂರ, ವಿಕ್ರಮಕುಮಾರ ಪಾಟೀಲ ಇತರರಿದ್ದರು.
ಸಂಬರಗಿ ವರದಿ: ಸಮೀಪದ ಶಿರೂರ ಗ್ರಾಪಂನಲ್ಲಿ ಅಧ್ಯಕ್ಷ ಬಾಳುದಾದಾ ಹಜಾರೆ ಭುವನೇಶ್ವರಿ ತಾಯಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ರಘುನಾಥ ಹಜಾರೆ, ಮಹಾದೇವ ಪಾಟೀಲ, ದಾದಾಸಾಹೇಬ ಹಜಾರೆ ಇತರರಿದ್ದರು. ಚಂದ್ರಗಿರಿ ದೇವಸ್ಥಾನದಲ್ಲಿ ರಾಜ್ಯೋತ್ಸವ ಆಚರಿಸಲಾಯಿತು. ಪಿಎಸ್‌ಐ ಶಿವಶಂಕರ ಮುಕರಿ, ಶಿವಾಜಿ ಸಾತಪುತೆ, ಅಣ್ಣಾಸಾಹೇಬ ಮಿಸಾಳ, ಅಬ್ದುಲ್ ಮುಲ್ಲಾ ಇತರರಿದ್ದರು.
ಖಿಳೇಗಾಂವ ಗ್ರಾಪಂನಲ್ಲಿ ಅಧ್ಯಕ್ಷ ಧರೆಪ್ಪ ಹೊನ್ನಾಗೋಳ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ರವಿ ನಾಗ್ಗೋಳ, ಸುನೀಲ ಚೌಗುಲೆ ಇತರರಿದ್ದರು.
ಐಗಳಿ ವರದಿ: ಗ್ರಾಪಂನಲ್ಲಿ ಮಂಗಳವಾರ ರಾಜ್ಯೋತ್ಸವ ಆಚರಿಸಲಾಯಿತು. ನಾಡದೇವಿಗೆ ಗ್ರಾಪಂ ಅಧ್ಯಕ್ಷೆ ರಾಜಶ್ರೀ ಪಾಟೀಲ ಪೂಜೆ ನೆರವೇರಿಸಿದರು. ಸಿ.ಎಸ್.ನೇಮಗೌಡ, ಎ.ಎಸ್.ನಾಯಿಕ ಇತರರಿದ್ದರು.
ಮಾಂಜರಿ ವರದಿ: ಗ್ರಾಮದಲ್ಲಿ ಶಿವಾಜಿ ತರುಣ ಮಂಡಳದಿಂದ 67ನೇ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು. ಶಿವಾಜಿ ಕ್ರೆಡಿಟ್ ಸೌಹಾರ್ದ ಸಂಸ್ಥೆ ಅಧ್ಯಕ್ಷ ರಾಮಚಂದ್ರ ಭೋಸಲೆ, ಪಿಕೆಪಿಎಸ್ ಅಧ್ಯಕ್ಷ ಅಣ್ಣಾಸಾಹೇಬ ಯಾದವ, ಅಮರ ಯಾದವ, ಗ್ರಾಪಂ ಸದಸ್ಯ ಶೀತಲ್ ಮಗ್ಗೆನ್ನರ, ಸಂಜಯ ನಾಂದರೆ, ಸುಶಾಂತ ಲಂಬುಗೋಳ ಇತರರಿದ್ದರು.