ಗಡಿನಾಡು ಉತ್ಸವಕ್ಕೆ ಸಿದ್ಧತೆ

13Samabaragi2
Published on

ಸಂಬರಗಿ: ಗಡಿಭಾಗದ ಬಳ್ಳಿಗೇರಿ ಗ್ರಾಮದಲ್ಲಿ ಡಿ.14ರಂದು ಸಂಜೆ 6 ಗಂಟೆಗೆ ಜಯ ಕರ್ನಾಟಕ ಸಂಘಟನೆ ವತಿಯಿಂದ ಗಡಿನಾಡು ಉತ್ಸವ ಜರುಗಲಿದೆ ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕಾಧ್ಯಕ್ಷ ಆಕಾಶ ಕಿರಣಗಿ ಹೇಳಿದರು.

ಸಮೀಪದ ಬಳ್ಳಿಗೇರಿ ಗ್ರಾಮದಲ್ಲಿ ಈಚೆಗೆ ಗಡಿನಾಡು ಉತ್ಸವ ಕಾರ್ಯಕ್ರಮದ ಪ್ರಚಾರ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಂಘಟನೆ ಅಧ್ಯಕ್ಷ ಡಾ.ಬಿ.ಎನ್.ಜಗದೀಶ ಕಾರ್ಯಕ್ರಮ ಉದ್ಘಾಟಿಸುವರು. ಕಕಮರಿ ಮಠದ ಅಭಿನವ ಗುರುಲಿಂಗ ಜಂಗಮ ಮಹಾರಾಜರು ಸಾನ್ನಿಧ್ಯ ವಹಿಸುವರು.

ಮುಖ್ಯ ಅಥಿತಿಗಳಾಗಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ, ಮಾಜಿ ಶಾಸಕರಾದ ಶ್ರೀಮಂತ ಪಾಟೀಲ, ಮಹೇಶ ಕುಮಟಳ್ಳಿ, ಶಹಜಹಾನ್ ಡೊಂಗರಗಾವ ಹಾಗೂ ಮುಖಂಡರಾದ ನಿಂಗಪ್ಪ ಕೊಕಲೆ, ಸದಾಶಿವ ಬುಟಾಳಿ, ಗಜಾನನ ಮಂಗಸೂಳಿ, ಧರೆಪ್ಪ ಟಕ್ಕಣ್ಣವರ, ಶಿವು ಗುಡ್ಡಾಪುರ, ಚಂದ್ರಕಾಂತ ಇಮ್ಮಡಿ ಸೇರಿ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು. ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಪ್ರಶಾಂತ ತೊಡಕರ ಮಾತನಾಡಿ, ವಿವಿಧ ಕ್ಷೇತ್ರದ ಸಾಧಕರಿಗೆ ‘ಜಯ ಕರ್ನಾಟಕ ರತ್ನ’ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು. ಕನ್ನಡಪರ ಸಂಘಟಕರಾದ ರವಿ ಬಡಕಂಬಿ, ದೀಪಕ ಬುರ್ಲಿ, ವಿಜಯಕುಮಾರ ಪವಾರ, ಪ್ರಶಾಂತ ತೊಡಕರ, ಸಚಿನ ಕಾಂಬಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net