ಗಡಿನಾಡಿನಲ್ಲಿ ಕನ್ನಡ ಮಾಯ

೧೯ಎಂಡಿಆರ್೧
ಮದ್ದೂರು ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅಂಕಣಕಾರ ಗುಬ್ಬಿ ಗೂಡು ರಮೇಶ್ ಉದ್ಘಾಟಿಸಿದರು. ಸಿ.ಎಚ್. ಕಾಳೀರಯ್ಯ, ನಾರಾಯಣ, ಸುನೀಲ್ಕುಮಾರ್, ಹರ್ಷ, ಅಪೂರ್ವಚಂದ್ರು ಇದ್ದರು.
Published on

ಮದ್ದೂರು: ರಾಜ್ಯದ ಗಡಿನಾಡಿನಲ್ಲಿ ಕನ್ನಡ ಮಾಯವಾಗಿದೆ. ಅನ್ಯ ಭಾಷೆಗಳ ಆಕ್ರಮಣದಿಂದ ಕನ್ನಡ ನಲುಗಿ ಹೋಗುತ್ತಿದೆ ಎಂದು ಲೇಖಕ ಗುಬ್ಬಿಗೂಡು ರಮೇಶ್ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜು ಆವರಣದಲ್ಲಿ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕದ ಗಡಿ ಭಾಗಗಳಲ್ಲಿ ಅನ್ಯ ಭಾಷೆಗಳಾದ ತೆಲುಗು, ತಮಿಳು, ಮರಾಠಿ, ಉರ್ದು ಭಾಷೆಗಳು ಕನ್ನಡ ಭಾಷೆಯನ್ನು ಆಕ್ರಮಿಸಿಕೊಂಡಿವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ, ಕೋಲಾರ, ಮಾಲೂರು, ಬೆಳಗಾವಿಯ ಕೆಲ ಭಾಗ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ಕಡಿಮೆಯಾಗಿದೆ. ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಕೆಲಸವಾಗುತ್ತಿದೆ. ಸರ್ಕಾರ ಗಡಿ ಭಾಗದಲ್ಲಿ ಕನ್ನಡವನ್ನು ಬೆಳೆಸುವ ಕಾರ್ಯಗಳನ್ನು ಮಾಡುತ್ತಿಲ್ಲ ಎಂದರು. ಪ್ರತಿಯೊಬ್ಬರಿಗೂ ತಮ್ಮದೇ ಆದ ಶಕ್ತಿ ಇದೆ. ಕನ್ನಡ ಉಳಿವಿಗಾಗಿ ಪಣ ತೊಡಬೇಕಿದೆ ಎಂದರು.

ವಕೀಲ ಎಂ.ಸಿ.ಅಶೋಕ್‌ಕುಮಾರ್, ಇಂಜಿನಿಯರ್ ಡಿ.ರಮೇಶ, ಹಿರಿಯ ರಂಗಭೂಮಿ ಕಲಾವಿದ ಸಿ. ಕೃಷ್ಣೇಗೌಡ, ಪ್ರಗತಿಪರ ರೈತ ಕೆ.ಬಿ. ಶಂಕರಯ್ಯ ಅವರನ್ನು ಅಭಿನಂದಿಸಲಾಯಿತು. ಪ್ರಾಂಶುಪಾಲ ಕೆ.ಬಿ.ನಾರಾಯಣ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಕೆ.ಎಸ್.ಸುನಿಲ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಚ್.ಕಾಳೀರಯ್ಯ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ವಿ.ಹರ್ಷ, ಎಚ್‌ಕೆವಿ ಕಾಲೇಜಿನ ಕಾರ್ಯದರ್ಶಿ ಅಪೂರ್ವಚಂದ್ರ , ಪ್ರಾಧ್ಯಾಪಕ ಮಾದೇಗೌಡ, ಕಸಾಪ ಕಾರ್ಯದರ್ಶಿ ಡಾ.ಎಸ್.ಕೆ. ಶಂಕರಯ್ಯ, ಎಚ್.ಕೆ. ಆನಂದ, ಖಚಾಂಚಿ ಬೊಮ್ಮೇಗೌಡ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net