ಗಡಿಗೌಡಗಾಂವದಲ್ಲಿ ಬಾಲ್ಯವಿವಾಹಕ್ಕೆ ಬ್ರೇಕ್

4 Hulsur 1
 ಹುಲಸೂರು ತಾಲೂಕಿನ ಗಡಿಗೌಡಗಾಂವ ಗ್ರಾಮದಲ್ಲಿ ಮಂಗಳವಾರ ಬಾಲಕಿ ವಿವಾಹ ತಡೆದ ಅಧಿಕಾರಿಗಳು ಪಾಲಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡರು. ತಹಸೀಲ್ದಾರ್ ಶಿವಾನಂದ ಮೇತ್ರೆ, ತಾಪಂ ಇಒ ವೈಜಣ್ಣ ಫುಲೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ವಿನೋದ ಕುರೆ ಇತರರಿದ್ದರು.
Published on

ಹುಲಸೂರು: ಗಡಿಗೌಂಡಗಾಂವ ಗ್ರಾಮದಲ್ಲಿ ಮಂಗಳವಾರ ಅಪ್ರಾಪ್ತಳ ವಿವಾಹಕ್ಕೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ. ೧೬ ವರ್ಷದ ಬಾಲಕಿಗೆ ೨೧ ವರ್ಷದ ಯುವಕನ ಜತೆ ಮಾ.೭ರಂದು ವಿವಾಹ ನಿಶ್ಚಯವಾಗಿದ್ದು, ಸಿದ್ಧತೆ ಬಗ್ಗೆ ಮಾಹಿತಿ ಅರಿತು ಬಾಲಕಿ ನಿವಾಸಕ್ಕೆ ಧಾವಿಸಿದ ತಹಸೀಲ್ದಾರ್ ಶಿವಾನಂದ ಮೇತ್ರೆ ನೇತೃತ್ವದ ತಂಡ ಮದುವೆ ಮಾಡದಂತೆ ಪಾಲಕರಿಗೆ ತಾಕೀತು ಮಾಡಿದರು.

೧೮ ವರ್ಷ ತುಂಬುವವರೆಗೆ ಮದುವೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಪತ್ರ ಸಹ ಬರೆಸಿಕೊಂಡರು. ತಾಪಂ ಇಒ ವೈಜಣ್ಣ ಫುಲೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ವಿನೋದ ಕುರೆ, ಕಂದಾಯ ನಿರೀಕ್ಷಕ ಶರಣು ಪಾವಡಶೆಟ್ಟಿ, ಅಂಗನವಾಡಿ ಮೇಲ್ವಿಚಾರಕಿಯರಾದ ಕೌಸರಬಾನು, ಲಕ್ಷ್ಮೀಜ್ಯೋತಿ ಹಿರೇಮಠ, ಶ್ರೀದೇವಿ ಬಿರಾದಾರ ಇತರರಿದ್ದರು.

ಗಡಿಗೌಡಗಾಂವದಲ್ಲಿ ಬಾಲಕಿ ವಿವಾಹ ತಡೆದ ಅಧಿಕಾರಿಗಳ ಕಾರ್ಯಕ್ಕೆ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಕೋಸಂಬೆ ಮೆಚ್ಚುಗೆ ವ್ಯಕ್ತಪಡಿಸಿ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಅಧಿಕಾರಿಗಳನ್ನು ಸಂಪರ್ಕಿಸಿ ಬಾಲಕಿಯ ಶೈಕ್ಷಣಿಕ ಸಹಾಯಕ್ಕಾಗಿ ಮಾಸಿಕ ೪೦೦೦ ರೂ. ಮೂರು ವರ್ಷವರೆಗೆ ಕೊಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net