ಗಡಿ ಭದ್ರತಾ ಪಡೆಯಲ್ಲಿ 21 ವರ್ಷ ಸೇವೆ; ನಿವೃತ್ತ ಯೋಧನಿಗೆ ಸ್ವ-ಗ್ರಾಮದಲ್ಲಿ ಅದ್ದೂರಿ ಸ್ವಾಗತ

ANP WEB
Published on

ಆನಂದಪುರ: ಸೇವೆಯಿಂದ ನಿವೃತ್ತರಾಗಿ ಸ್ವಗ್ರಾಮಕ್ಕೆ ಮರಳಿದ ಸೈನಿಕ ರಾಘವೇಂದ್ರ ಅವರನ್ನು ಶನಿವಾರ ಇಲ್ಲಿನ ಬಸ್ ನಿಲ್ದಾಣದ ಆವರಣದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಶಾಸಕ ಹರತಾಳು ಹಾಲಪ್ಪ ಹಾಗೂ ಇಲ್ಲಿನ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ರಾಘವೇಂದ್ರ ಅವರನ್ನು ಅಭಿನಂದಿಸಿ ಮುಂದಿನ ಜೀವನಕ್ಕೆ ಶುಭ ಕೋರಿದರು. ಮುಂದಿನ ಜೀವನವನ್ನು ತಮ್ಮ ಸ್ವಗ್ರಾಮದಲ್ಲಿ ನಡೆಸಲು ಇಚ್ಛಿಸಿ ಗ್ರಾಮಕ್ಕೆ ಆಗಮಿಸಿದ ರಾಘವೇಂದ್ರ ಅವರನ್ನು ಯಡೇಹಳ್ಳಿಯ ಅಂಬೇಡ್ಕರ್ ವೃತ್ತದಿಂದ ಆನಂದಪುರದ ಮುಖ್ಯ ಬಸ್ ನಿಲ್ದಾಣದವರೆಗೆ ಅದ್ದೂರಿ ಮೆರವಣಿಗೆ ಮೂಲಕ ಕೆರೆತರಲಾಯಿತು. ಸಮೀಪದ ಯಡೇಹಳ್ಳಿಯ ರಾಘವೇಂದ್ರ ಗಡಿ ಭದ್ರತಾ ಪಡೆಯಲ್ಲಿ 21 ವರ್ಷಗಳ ಸೇವೆ ಸಲ್ಲಿಸಿ, ನ.30ರಂದು ನಿವೃತ್ತರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net