‘ಗಂಡಸ್ಕತ್ರಿ’ ನಾಟಕ ಪ್ರದರ್ಶನ

Drama-games
Published on

ಮೈಸೂರು: ಅದಮ್ಯ ರಂಗಶಾಲೆಯ ವತಿಯಿಂದ ರಂಗ ತರಬೇತಿ ಶಿಬಿರದ ಸಮಾರೋಪ ಹಾಗೂ ಖ್ಯಾತ ನಾಟಕಕಾರ ಟಿ.ಪಿ. ಕೈಲಾಸಂ ರಚನೆಯ ‘ಗಂಡಸ್ಕತ್ರಿ’ ನಾಟಕ ಪ್ರದರ್ಶನ ಅ. 8ರಂದು ಸಂಜೆ 6 ಗಂಟೆಗೆ ಜಯಲಕ್ಷ್ಮೀಪುರಂನ ವಿವೇಕಾನಂದ ಪದವಿಪೂರ್ವ ಕಾಲೇಜಿನ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ.


ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡುವರು. ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್‌ನ ಅಧ್ಯಕ್ಷ ಡಿ. ರವಿಕುಮಾರ್ ಅಧ್ಯಕ್ಷತೆ ವಹಿಸುವರು. ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಟಿ. ಸತೀಶ್ ಜವರೇಗೌಡ, ವಿಜಯನಗರ ಉಪವಿಭಾಗದ ಪೊಲೀಸ್ ಸಹಾಯಕ ಆಯುಕ್ತ ಜಿ.ಎಸ್. ಗಜೇಂದ್ರ ಪ್ರಸಾದ್ ಭಾಗವಹಿಸಲಿದ್ದಾರೆ.


ಯುವ ರಂಗಕರ್ಮಿ ವಿನೋದ್ ಸಿ. ಮೈಸೂರು ನಿರ್ದೇಶನದ ‘ಗಂಡಸ್ಕತ್ರಿ’ ನಾಟಕದಲ್ಲಿ ಮಾನಸ, ಉಲ್ಲಾಸ್, ಮನೋಜ್, ತೇಜಸ್ ಹಾಸನ ಕಲಾವಿದರು ಅಭಿನಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net