ಗಡವಂತಿಯಲ್ಲಿ ವೀರಭದ್ರೇಶ್ವರ ರಥೋತ್ಸವ ವೈಭವ

oplus_131072
ಹುಮನಾಬಾದ್ ತಾಲೂಕಿನ ಗಡವಂತಿಯಲ್ಲಿ ಶ್ರೀ ವೀರಭದ್ರೇಶ್ವರ ದೇವರ ಜಾತ್ರೆ ನಿಮಿತ್ತ ಅಸಂಖ್ಯ ಭಕ್ತರ ಜೈಘೋಷಗಳ ಮಧ್ಯೆ ಶುಕ್ರವಾರ ಸಂಜೆ ಸಂಭ್ರಮದ ರಥೋತ್ಸವ ಜರುಗಿತು.
Published on

ಹುಮನಾಬಾದ್: ಗಡವಂತಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವರ ಜಾತ್ರೋತ್ಸವ ನಿಮಿತ್ತ ಅಸಂಖ್ಯ ಭಕ್ತರ ಜೈಘೋಷಗಳ ಮಧ್ಯೆ ಶುಕ್ರವಾರ ಸಂಜೆ ವೈಭವದ ರಥೋತ್ಸವ ಜರುಗಿತು. ದೇವಸ್ಥಾನದಿಂದ ಊರ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆದ ಬಳಿಕ ರಥೋತ್ಸವ ನೆರವೇರಿತು.

ಭಕ್ತರು ಜೈಕಾರ ಹಾಕುತ್ತ ಬೆಂಡು-ಬತಾಸು, ಬಾಳೆಹಣ್ಣು, ಕಲ್ಲುಸಕ್ಕರೆ, ಖಾರೀಕ, ನಾಣ್ಯಗಳನ್ನು ರಥದ ಮೇಲೆಸೆದು ಭಕ್ತಿಸೇವೆ ಸಲ್ಲಿಸಿದರು. ಕಲಾ ತಂಡಗಳ ಡೊಳ್ಳು ಕುಣಿತ, ನಂದಿಕೋಲು ಪ್ರದರ್ಶನ, ವೀರಗಾಸೆ, ಬಣ್ಣಬಣ್ಣದ ಪಟಾಕಿಗಳ ಚಿತ್ತಾರ ಆಕರ್ಷಿಸಿತು.

ಜಾತ್ರೆ ನಿಮಿತ್ತ ದೇವಸ್ಥಾನದಲ್ಲಿ ಐದು ದಿನದಿಂದ ಅಭಿಷೇಕ, ವಿಶೇಷ ಪೂಜೆ, ವಿದ್ಯಾರ್ಥಿಗಳು ಹಾಗೂ ವಿವಿಧ ಮಂಡಳಿಗಳಿಂದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net