ಗಜೇಂದ್ರಗಡ ತಾಲೂಕಿನಲ್ಲಿ ಅಗತ್ಯ ಕ್ರಮ

26 GAJENDRAGAD 1
Published on

ಗಜೇಂದ್ರಗಡ: ಪಟ್ಟಣದ ಜಗದ್ಗುರು ತೋಂಟದಾರ್ಯ ಸಿಬಿಎಸ್​ಇ ಶಾಲೆಯಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಮತಪೆಟ್ಟಿಗೆ ಸೇರಿ ಅಗತ್ಯ ದಾಖಲೆಗಳನ್ನು ಶನಿವಾರ ವಿತರಿಸಲಾಯಿತು.

ತಹಸೀಲ್ದಾರ್ ಅಶೋಕ ಕಲಘಟಗಿ ಮಾತನಾಡಿ, ತಾಲೂಕಿನಲ್ಲಿ 134 ಮತಗಟ್ಟೆಗಳನ್ನು ತೆರೆಯಲಾಗಿದೆ. 10 ಸೂಕ್ಷ್ಮ 13 ಅತಿಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಬಿಗಿಭದ್ರತೆ ಕೈಗೊಳ್ಳಲಾಗಿದೆ ಎಂದರು.

ಉಪ ತಹಸೀಲ್ದಾರ್ ವೀರಣ್ಣ ಅಡಗತ್ತಿ ಮಾತನಾಡಿ, ಗಜೇಂದ್ರಗಡ ನೂತನ ತಾಲೂಕು ರಚನೆಯಾದ ಬಳಿಕ ಮೊದಲ ಚುನಾವಣೆ ನಡೆಯುತ್ತಿದ್ದು, ಎಲ್ಲ ಅಧಿಕಾರಿಗಳು ಚುನಾವಣೆಯನ್ನು ಯಶಸ್ವಿಗೊಳಿಸಲು ಸಹಕರಿಸಬೇಕು ಎಂದರು.

ನೋಡಲ್ ಅಧಿಕಾರಿ ಪ್ರಶಾಂತ ವರಗಪ್ಪನವರ, ಮಾಸ್ಟರ್ ಟ್ರೈನರ್ ಎಸ್.ಟಿ. ಬೈರಪ್ಪನವರ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net