ಗಜಪಡೆಯ ನಾಯಕ ಅಭಿಮನ್ಯು ಆನೆಗೆ ಭೇದಿ..!

mysore
Published on

ಮೈಸೂರು: ಗಜಪಡೆಯ ನಾಯಕ ಅಭಿಮನ್ಯು, ಪ್ರಶಾಂತ ಆನೆಗೆ 10 ದಿನ ಭೇದಿ, ಜ್ವರದಿಂದ ಬಳಲಿದ್ದರಿಂದ ಅವುಗಳ ತೂಕ ಹೆಚ್ಚಳ ಕ್ಷೀಣಿಸಿದೆ ಎಂದು ಡಾ.ಐ.ಬಿ.ಪ್ರಭುಗೌಡ ತಿಳಿಸಿದರು.

ಗಜಪಡೆಗೆ ಪೌಷ್ಟಿಕ ಆಹಾರ ನೀಡಲಾರಂಭಿಸಿದ್ದರಿಂದ ಆರಂಭದಲ್ಲಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಸೂಕ್ತ ಚಿಕಿತ್ಸೆಯಿಂದ ಆರೋಗ್ಯ ಸ್ಥಿತಿ ಸುಧಾರಿಸಿತು. ಪ್ರಶಾಂತ ಆನೆಗೆ 10 ದಿನ ಭೇದಿ, ಜ್ವರದಿಂದಾಗಿ ಸರಿಯಾಗಿ ಆಹಾರ ಸೇವಿಸಲಿಲ್ಲ.

ಅಭಿಮನ್ಯು ಆನೆ 10 ದಿನ ಭೇದಿ, ಜ್ವರ, ಹೊಟ್ಟೆ ನೋವಿನಿಂದ ಬಳಲಿತ್ತು. ಈ ಎರಡೂ ಆನೆಗೆ ಸಕಾಲಕ್ಕೆ ಪಶುವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದರು. ನಂತರ ಅಭಿಮನ್ಯು, ಪ್ರಶಾಂತ ಆನೆಯ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು.

ಅಭಿಮನ್ಯು ಅಂಬಾರಿ ಹೊತ್ತು ಕಳೆದ ವರ್ಷಕ್ಕಿಂತ ಈ ಸಲ ಸರಾಗವಾಗಿ ತ್ವರಿತವಾಗಿ ಬನ್ನಿಮಂಟಪದ ಪಂಜಿನ ಕವಾಯತ್ ಮೈದಾನ ತಲುಪಿತು ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ನಿತ್ಯ ತಾಲೀಮಿಗೆ ಹೊರಟ ಗಜಪಡೆಯನ್ನು ನೋಡುವುದಕ್ಕೆಂದು ದಾರಿಯುದ್ದಕ್ಕೂ ಅಪಾರ ಸಂಖ್ಯೆಯಲ್ಲಿ ಜನ ಜಮಾವಣೆಗೊಳ್ಳುತ್ತಿದ್ದರು.

ಈ ಸಂಖ್ಯೆ 10 ಸಾವಿರ ದಾಟುತ್ತಿತ್ತು. ಜನಜಂಗುಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಪ್ರಾಣಿಗಳಿಂದ ಜನರಿಗೆ ಯಾವುದೇ ತೊಂದರೆಯಾಗುತ್ತಿರಲಿಲ್ಲ.

ಆದರೆ ಜನ ಜಂಗುಳಿ ಹೆಚ್ಚಾಗುತ್ತಿದ್ದರಿಂದ ಆನೆಗಳನ್ನು ಸುರಕ್ಷಿತವಾಗಿ ಕರೆತರುವುದರೊಂದಿಗೆ ಸಾರ್ವಜನಿಕರ ರಕ್ಷಣೆಯೂ ನಮಗೆ ಸವಾಲಾಗಿತ್ತು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net