ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ

Arrest
Published on

ಮೈಸೂರು; ಗಾಂಜಾ ಸಾಗಿಸುತ್ತಿದ್ದ ಇಬ್ಬರು ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಅವರಿಂದ 20.19 ಲಕ್ಷ ರೂ. ಮೌಲ್ಯದ 57 ಕೆಜಿ 700 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ.


ಉದಯಗಿರಿ ಠಾಣಾ ವ್ಯಾಪ್ತಿಯ ನಿಮ್ರಾ ಮಸೀದಿ ಬಳಿಯ ಉದ್ಯಾನ ರಸ್ತೆಯಲ್ಲಿ ಹಿಂಬದಿಯ ನಂಬರ್ ಪ್ಲೇಟ್ ಇಲ್ಲದೆ ಸ್ಕೂಟರ್‌ನಲ್ಲಿ ಬರುತ್ತಿದ್ದ ಇಬ್ಬರು ಆರೋಪಿಗಳನ್ನು ಹಿಡಿದು ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಆಗ ಸ್ಕೂಟರ್‌ನಲ್ಲಿ ಗಾಂಜಾ ಪತ್ತೆಯಾಗಿದೆ. ಅದರಲ್ಲಿದ್ದ 1 ಕೆ.ಜಿ. ಗಾಂಜಾ ಹಾಗೂ ಸ್ಕೂಟರ್ ಅನ್ನು ಜಪ್ತಿ ಮಾಡಿ ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಯಿತು.


ಈ ಸಂದರ್ಭದಲ್ಲಿ ದೊರೆತ ಮಾಹಿತಿ ಮೇರೆಗೆ ಮಹದೇವಪುರ ಮುಖ್ಯರಸ್ತೆಯ ಕಾವೇರಿನಗರದ ಗೋದಾಮಿನ ಮೇಲೆ ಪೊಲೀಸರು ದಾಳಿ ಮಾಡಿ, ಮತ್ತೊಬ್ಬ ಆರೋಪಿ ದಾಸ್ತಾನು ಮಾಡಿದ್ದ 56 ಕೆ.ಜಿ. 700 ಗ್ರಾಂ ತೂಕದ ಗಾಂಜಾವನ್ನೂ ವಶಪಡಿಸಿಕೊಂಡಿದ್ದಾರೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net