ಗಾಂಜಾ ಮಾರಾಟ ಮಾಡುತ್ತಿದ್ದ 8 ಜನರ ಬಂಧನ

ganja
Published on

ಹುಬ್ಬಳ್ಳಿ: ನಗರದ ವಿವಿಧೆಡೆ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ಇತ್ತೀಚೆಗೆ ದಾಳಿ ಮಾಡಿದ ಪೊಲೀಸರು, 8 ಜನರನ್ನು ಬಂಧಿಸಿದ್ದಾರೆ.

  • ಇಲ್ಲಿಯ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಸಮೀತ ಕರನಾಚಿ, ಶಾನವಾಜ ಖಾನ್ ಸೇರಿ ಮೂವರನ್ನು ಬಂಧಿಸಿದ್ದು, 2,320 ರೂ. ಮೌಲ್ಯದ 232 ಗ್ರಾಂ ಗಾಂಜಾ ಜಪ್ತಿ ಮಾಡಿದೆ. ಗೋಕುಲ ರೋಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
  • ಇಲ್ಲಿಯ ವಿದ್ಯಾನಗರದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಸಿದ್ಧಾರ್ಥ ಅಥಣಿ ಎನ್ನುವಾತನನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಪರಾರಿಯಗಿದ್ದಾನೆ. ಬಂಧಿತನಿಂದ 9ಸಾವಿರ ರೂ. ಮೌಲ್ಯದ 180 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
  • ಇಲ್ಲಿಯ ಮಂಟೂರ ರೋಡ್ ಹತ್ತಿರ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಮಲ್ಲಿಕಜಾನ್ ಬಿಜಾಪುರ ಎಂಬಾತನನ್ನು ಬಂದಿಸಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ. ಬಂಧಿತನಿಂದ 4,800 ರೂ. ಮೌಲ್ಯದ 160 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
  • ಧಾರವಾಡದ ಪೆಪ್ಸಿ ಕಂಪನಿ ಹತ್ತಿರ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಅಭಿಷೇಕ ಉಲ್ಲಾಳ, ಉಮೇಶ ಕೊಲ್ಹಾರ, ಅಭಿಷೇಕ ಹಿರೇಮಠ ಎಂಬುವರನ್ನು ಬಂಧಿಸಿದ್ದು, ಬಂಧಿತರಿಂದ 45 ಸಾವಿರ ರೂ. ಮೌಲ್ಯದ 447 ರೂ. ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net