ಗಗನಕ್ಕೇರಿದ ಬಿಳಿ ಜೋಳದ ದರ

05-09kodekal01
ಕೊಡೇಕಲ್ ಸಂತೆಯಲ್ಲಿ ಮಾರಾಟಕ್ಕೆ ಬಂದಿರುವ ಜೋಳ.
Published on

ಕೊಡೇಕಲ್: ರೈತರು ಬೆಳೆಯುವ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೆ ಒದ್ದಾಡುವಂತೆ ಆಗುತ್ತದೆ. ಆದರೆ ಕೆಲ ದಿನಗಳಿಂದ ಜೋಳಕ್ಕೆ ಬಂಗಾರದ ಬೆಲೆ ಬಂದಂತಾಗಿದೆ.

ವರ್ಷದ ಆರಂಭದಿಂದ ಜೋಳಕ್ಕೆ ಉತ್ತಮ ಬೆಲೆ ಸಿಗುತ್ತಿದ್ದು, ಕ್ವಿಂಟಾಲ್‌ಗೆ ೫೫೦೦ರಿಂದ ೬೦೦೦ ರೂ. ಮಾರಾಟವಾಗುತ್ತಿದೆ. ಖಾನಾವಳಿಗಳಲ್ಲಿ ಒಂದು ರೊಟ್ಟಿ ಬೆಲೆ ೧೦ ರೂ., ಸಂತೆಯಲ್ಲಿ ಸೇರಿಗೆ ೫೦-೬೦ ರೂ. ಕೊಟ್ಟು ಜೋಳ ಖರೀದಿಸುತ್ತಿರುವ ಜನರು ತಮ್ಮ ಜೇಬು ಮುಟ್ಟಿಕೊಳ್ಳುವಂತಾಗಿದೆ.

ತಾಲೂಕಿನಾದ್ಯಂತ ರೈತರು ಹೆಚ್ಚಾಗಿ ವಾಣಿಜ್ಯ ಬೆಳೆಗಳಾದ ತೊಗರಿ, ಹತ್ತಿ, ಸೂರ್ಯಕಾಂತಿ, ಅಜ್ವಾನ ಮತ್ತು ಮೆಣಸಿನಕಾಯಿ ಬೆಳೆಯುತ್ತಿದ್ದು, ಬಿಳಿ ಜೋಳ ಬಿತ್ತನೆ ಮಾಡುವುದನ್ನೇ ಮರೆತು ಬಿಟ್ಟಿದ್ದಾರೆ. ಇನ್ನು ಜಾನುವಾರುಗಳಿರುವ ಬೆರಳೆಣಿಕೆ ರೈತರು ಕಡಿಮೆ ಪ್ರದೇಶದಲ್ಲಿ ಜೋಳ ಬಿತ್ತನೆ ಮಾಡುತ್ತಿದ್ದಾರೆ. ಇದರಿಂದಾಗಿ ಜೋಳದ ಬಿತ್ತನೆ ಪ್ರದೇಶ ಕ್ರಮೇಣ ಇಳಿಕೆಯಾಗುತ್ತಿರುವುದು ದರ ಹೆಚ್ಚಳಕ್ಕೆ ಕಾರಣವಾಗಿದೆ.

ಬಿಳಿ ಜೋಳದ ದರ ಹೆಚ್ಚಿದ ಕಾರಣ ರೊಟ್ಟಿ ದರ ಜಾಸ್ತಿ ಮಾಡಲಾಗಿದೆ. ಮೂರು ತಿಂಗಳಿಂದ ಕ್ವಿಂಟಾಲ್‌ಗೆ ೫೫೦೦ ರೂ. ನೀಡಿ ಖರೀದಿಸುತ್ತಿದ್ದೇವೆ. ಬೀಸುವ ದರವೂ ಹೆಚ್ಚಾಗಿದೆ.
| ಶಿವರಾಜ ತಂಗಡಿ ಖಾನಾವಳಿ ಮಾಲೀಕ ಕೊಡೇಕಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net