ಗಂಧನಹಳ್ಳಿ ಹುಣಸಮ್ಮನ ಅದ್ದೂರಿ ರಥೋತ್ಸವ

01 KRN-1
ಕೆ.ಆರ್.ನಗರ ತಾಲೂಕಿನ ಗಂಧನಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಹುಣಸಮ್ಮನ ರಥೋತ್ಸವ ವಿಜೃಂಭಣಿಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
Published on

ಕೆ.ಆರ್.ನಗರ: ತಾಲೂಕಿನ ಗಂಧನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಗ್ರಾಮದೇವತೆ ಹುಣಸಮ್ಮನ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣಿಯಿಂದ ನೆರವೇರಿತು.

ಪ್ರತಿ ವರ್ಷದಂತೆ ಗಂಧನಹಳ್ಳಿ ಗ್ರಾಮವು ಹಸಿರು ತೋರಣಗಳಿಂದ ಮಧುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಹುಣಸಮ್ಮನ ಉತ್ಸವ ಮೂರ್ತಿಯನ್ನು ಹೂವಿನ ಪಲ್ಲಕ್ಕಿಯಲ್ಲಿ ಕೂರಿಸಿ ಮಂಗಳವಾದ್ಯ ಹಾಗೂ ವಿವಿಧ ಕಲಾ ತಂಡದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ನಂತರ ಗ್ರಾಮದ ಹೊರವಲಯದಲ್ಲಿ ಇರುವ ರಥದಲ್ಲಿ ಕೂರಿಸಿ ನಾಲ್ಕು ಸುತ್ತು ಹಾಕುವ ಮೂಲಕ ಸಾವಿರಾರು ಭಕ್ತರು, ಮಹಿಳೆಯರು ಹಾಗೂ ನವದಂಪತಿಗಳು ತಂಬಿಟ್ಟಿನ ಅರತಿಯೊಂದಿಗೆ ತಾಯಿಗೆ ಜೈಕಾರ ಹಾಕಿ, ಉತ್ತಮ ಮಳೆ, ಬೆಳೆ ಆಗುವಂತೆ, ಗ್ರಾಮಕ್ಕೆ ಯಾವುದೇ ರೋಗ-ರುಜಿನಗಳು ಬಾರದಂತೆ ಪ್ರಾರ್ಥಿಸಿದರು.

ಕರೋನಾದಿಂದ ಕಳೆದ ಎರಡು ವರ್ಷಗಳಿಂದ ರಥೋತ್ಸವ ರದ್ದುಗೊಂಡಿತ್ತು. ಈ ಬಾರಿ ಯಾವುದೇ ಲೋಪವಿಲ್ಲದೆ ಬಹಳ ವಿಜೃಂಭಣೆಯಿಂದ ಜರುಗಿತು. ರಥೋತ್ಸವದಲ್ಲಿ ಭಾಗವಹಿಸಿದ ಭಕ್ತರಿಗೆ ಕನಕದಾಸ ಯುವಕರ ಸಂಘದ ವತಿಯಿಂದ ಮಜ್ಜಿಗೆ, ಪಾನಕ ವಿತರಣೆ ಮಾಡಲಾಯಿತು.

ಕಾಂಗ್ರೆಸ್ ಅಭ್ಯರ್ಥಿ ಡಿ.ರವಿಶಂಕರ್, ತಾಲೂಕು ಕುರುಬರ ಸಂಘದ ಮಾಜಿ ಅಧ್ಯಕ್ಷ ಜಿ.ಎನ್.ಮಲ್ಲೇಗೌಡ, ಯಜಮಾನ ಜಿ.ಎನ್.ರಘು, ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಗಂಧನಹಳ್ಳಿ ಹೇಮಂತ್, ಮುಖಂಡರಾದ ವೆಂಕಟೇಶ್, ಲೋಕೇಶ್, ಜಿ.ಆರ್.ಸತೀಶ್, ಎಂ.ನಾಗರಾಜ್, ಅರ್ಚಕ ರವಿಶಂಕರ್, ಲೋಕೇಶ್, ಸಚ್ಚಿ, ಈಶ್ವರ, ಪ್ರವೀಣ, ಜಿ.ಪಿ.ರವಿ, ಭಾಸ್ಕರ್, ಧನಂಜಯ, ವ್ಯೆಭವ್, ಲೋಹಿತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net