ಗಂಧದ ಮರ ಕಳ್ಳತನ

12 mlv 2
Published on

ಮಳವಳ್ಳಿ: ಪಟ್ಟಣದ ತಹಸೀಲ್ದಾರ್ ವಸತಿಗೃಹದ ಆವರಣದಲ್ಲಿ ಬೆಳೆದಿದ್ದ ಗಂಧದ ಮರವನ್ನು ಶುಕ್ರವಾರ ರಾತ್ರಿ ಕಳ್ಳರು ಕಡಿದುಕೊಂಡು ಹೋಗಿದ್ದಾರೆ.


ಪಟ್ಟಣದ ಹೃದಯ ಭಾಗದಲ್ಲೇ ವಸತಿ ಗೃಹವಿದ್ದು, ತಹಸೀಲ್ದಾರ್ ವಾಸವಿರಲಿಲ್ಲ. ಸುತ್ತಲೂ ತಾಲೂಕು ಕಚೇರಿ ಹಾಗೂ ಪಟ್ಟಣ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳು ಹಾಗೂ ಇವುಗಳಿಗೆ ಹೊಂದಿಕೊಂಡತೆ ರಾಜ್ಯ ಮುಖ್ಯ ಹೆದ್ದಾರಿಯಲ್ಲಿ ರಾತ್ರಿ ವೇಳೆಯಲ್ಲೂ ವಾಹನ ಸಂಚಾರಗಳಿರುತ್ತದೆ. ಅಲ್ಲದೇ ಹೈವೇ ಪೆಟ್ರೋಲ್ ಪೊಲೀಸ್ ವಾಹನ ಸದಾ ಗಸ್ತಿನಲ್ಲಿರುತ್ತದೆ. ಇಂತಹ ಸೂಕ್ಷ್ಮ ಪಹರೆ ಇರುವ ಸ್ಥಳದಲ್ಲೇ ಗಂಧದ ಮರ ಕಡಿದುಕೊಂಡು ಹೋಗುವ ಮೂಲಕ ಕಳ್ಳರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ. ತಾಲೂಕು ಕಚೇರಿಯಿಂದ ಗಂಧದಮರ ಕಡಿದಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net