ಗಂಡೋರಿ ಬಸವಕಲ್ಯಾಣಕ್ಕೆ ಬೇಡ

subhashchandra kapate
Published on

ಕಲಬುರಗಿ: ಗಂಡೋರಿ ನಾಲಾ ಜಲಾಶಯ ನೀರು ಬಸವಕಲ್ಯಾಣಕ್ಕೆ ಸರಬರಾಜು ಸ್ಥಗಿತಗೊಳಿಸಬೇಕು ಎಂಬುದು ಸೇರಿ ವಿವಿದ ಬೇಡಿಕೆ ಈಡೇರಿಸಲು ಆಗ್ರಹಿಸಿ ಏ.೨೯ರಂದು ಮಹಾಗಾಂವ್ ಕ್ರಾಸ್‌ನಲ್ಲಿ ಹೋರಾಟ ನಡೆಸಲಾಗುವುದು ಎಂದು ಕಾಯಕ ಕ್ರಾಂತಿ ದಳ ಸಂಸ್ಥಾಪಕ ಸುಭಾಶ್ಚಂದ್ರ ಖಪಾಟೆ ಹೇಳಿದರು.
ಮಹಾಗಾಂವ ತಾಲೂಕು ಎಂದು ಘೋಷಿಸಬೇಕು, ಬೆಣ್ಣೆತೋರಾ ಜಲಾಶಯ ಹಿನ್ನೀರಿನ ಕುರಿಕೋಟಾ ನೀರು ಮಹಾಗಾಂವ ಹೊಸ ಬಡವಾಣೆಗಳಿಗೆ ಶಾಶ್ವತ ನೀರು ಒದಗಿಸಬೇಕು, ಆರು ಹಾಸಿಗೆ ಇದ್ದ ಆಸ್ಪತ್ರೆಯನ್ನು ೩೦ ಹಾಸಿಗೆಯ ಆಸ್ಪತ್ರೆಯನ್ನಾಗಿ ಪರಿವರ್ತಿಸಬೇಕು, ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸಿ ಗ್ರಾಮೀಣ ಸರ್ಕಲ್ ಇನ್ಸಪೆಕ್ಟರ್ ಕಚೇರಿ ಸ್ಥಾಪಿಸಬೇಕು, ಮಹಾಗಾಂವ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭಿಸಬೇಕು, ಮಹಾಗಾಂವದಲ್ಲಿ ಬಸ್ ನಿಲ್ದಾಣ ತ್ವರಿತ ಆಗಬೇಕು, ತಾಲೂಕು ಕ್ರೀಡಾಂಗಣ ಪೂರ್ಣಗೊಳಿಸಬೇಕು, ರೇವಗ್ಗಿ ರೇವಣಸಿದ್ಧೇಶ್ವರ ಮಹಾದ್ವಾರ ಕಾಮಗಾರಿ ಪೂರ್ಣಗೊಳಿಸಬೇಕು, ಮಹಿಳಾ ವಿಶ್ವವಿದ್ಯಾಲಯ ಹಾಗೂ ಮಹಿಳಾ ಹೈಸ್ಕೂಲ್ ಪ್ರಾರಂಭಿಸಬೇಕು. ಚಂದ್ರನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net