

ಕಲಬುರಗಿ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ, ನೆಹರು ಗಂಜ್ ಪ್ರದೇಶದಲ್ಲಿ ಅಡತ್ ವ್ಯಾಪಾರಿಗಳಿಂದ ಮೂರ್ತ ಪೂಜೆಯನ್ನು ಭಾನುವಾರ ಭಕ್ತಿ, ಶ್ರದ್ಧೆ ಸಡಗರದಿಂದ ನೆರವೇರಿಸಲಾಯಿತು.
ಪ್ರತಿ ವರ್ಷ ಹೊಸ ವ್ಯಾಪಾರವನ್ನು ಮೂರ್ತ ಪೂಜೆಯೊಂದಿಗೆ ಆರಂಭಿಸುವ ಅಡತ್ ವ್ಯಾಪಾರಿಗಳು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದ ೯ನೇ ಪೀಠಾಧಿಪತಿ ಶ್ರೀ ಚಿ.ದೊಡ್ಡಪ್ಪ ಅವರಿಗೆ ತುಲಾಬಾರ ನೆರವೇರಿಸಲಾಯಿತು.
ಶ್ರೀ ಶರಣಬಸವೇಶ್ವರರ ೨೦೨ನೇ ಜಾತ್ರಾ ನಿಮಿತ್ತ ೯ನೇ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪರಿಗೆ ಬೆಳ್ಳಿ ಕಿರೀಟ ಅರ್ಪಿಸಲಾಯಿತು.
ಸಂಸದ ಡಾ.ಉಮೇಶ ಜಾಧವ್, ಶಾಸಕರಾದ ಬಸವರಾಜ ಮತ್ತಿಮಡು, ಖನೀಜ್ ಫಾತಿಮಾ, ಅಲ್ಲಮಪ್ರಭು ಪಾಟೀಲ್, ಬಿ.ಜಿ ಪಾಟೀಲ್, ಶಶೀಲ ನಮೋಶಿ, ಪ್ರಮುಖರಾದ ಬಸವರಾಜ ದೇಶಮುಖ, ಶಶಿಕಾಂತ ಪಾಟೀಲ್, ರಾಜಾ ಭೀಮಳ್ಳಿ, ನೀಲಕಂಠ ಮೂಲಗೆ, ಫರಾಜುಲ್ ಇಸ್ಲಾಂ, ಶ್ರೀಮಂತ ಉದನೂರ, ಸಂತೋಷ ಲಂಗಾರ, ಶಶಿಕಾಂತ ಪಾಟೀಲ್ ಚಂದ್ರಶೇಖರ ಕೋಬಾಳ, ಉದಕುಮಾರ ಚಿಂಚೋಳಿ, ಸತೀಶ ಚಿಂಚೋಳಿ ಇತರರಿದ್ದರು.