

ಮೈಸೂರು: ನಗರದ ಬೋಗಾದಿ ಮುಖ್ಯರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ನರ್ಸರಿ ಚಿಣ್ಣರಿಂದ ಕೈತುತ್ತು ಉತ್ಸವ ಮತ್ತು ನೀಲಿ ವರ್ಣದ ದಿನ (ಬ್ಲೂ ಡೇ) ವನ್ನು ವೈವಿಧ್ಯಮಯವಾಗಿ ಆಚರಿಸಲಾಯಿತು.
ಶಾಲಾ ಆಡಳಿತಾಧಿಕಾರಿ ಕಾಂತಿನಾಯಕ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಮಕ್ಕಳಿಗೆ ಕೈ ತುತ್ತು ತಿನ್ನಿಸಿ, ನೀಲಿ ಬಣ್ಣದ ಬಗ್ಗೆ ಶಿಶುಗೀತೆಯನ್ನು ಹೇಳಿಕೊಟ್ಟು, ಬಣ್ಣಗಳ ಬಗ್ಗೆ ಅರಿವು ಮೂಡಿಸಿದರು.
ಮುಖ್ಯ ಶಿಕ್ಷಕ ಮೊಹಮ್ಮದ್ ಫಾರೂಕ್, ಶಿಕ್ಷಕ, ಶಿಕ್ಷಕೇತರರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಕ್ಕಳು ನೀಲಿ ಬಣ್ಣದ ವಸ್ತ್ರ ಧರಿಸಿದ್ದರು.