ಗಂಗೋತ್ರಿ ಜ್ಞಾನವಿಕಾಸ ಕೇಂದ್ರ ಆರಂಭ

PHOTO-1 (2)--05
Published on

ಚಿತ್ರದುರ್ಗ: ಚಿತ್ರದುರ್ಗ ತಾಲೂಕು ಬೊಮ್ಮೇನಹಳ್ಳಿಯಲ್ಲಿ ಈಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗಂ ಗೋತ್ರಿ ಜ್ಞಾನವಿಕಾಸ ಕೇಂದ್ರವನ್ನು ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್‌ಪೂಜಾರಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಮಹಿಳೆಯರ ಸಬಲೀಕರಣಕ್ಕಾಗಿ ಹೇಮಾವತಿ ಹೆಗ್ಗಡೆ ಅವರು ಜ್ಞಾನಿವಿಕಾಸ ಕೇಂದ್ರ ಆರಂಭಿಸಿದ್ದಾರೆ. ಗ್ರಾಮೀಣ ಮಹಿಳೆಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಭರಮಸಾಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ,ಆರೋಗ್ಯ ಶಿಕ್ಷ ಣಾಧಿಕಾರಿ ಮೂಗಪ್ಪ,ಪಿಡಿಒ ಇರ್ಫಾನುಲ್ಲಾ,ಸುಮಾ,ಸಂತೋಷ್,ಶಿವಲೀಲಾ ಎಸ್.ಬಾಗೋಡಿ,ನಂದಿನಿ,ಶೀಲಾ,ಲಾವಣ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net