

ಹೊಳೆನರಸೀಪುರ: ಲೋಕಕಲ್ಯಾಣಕ್ಕಾಗಿ ಶಿವನ ಜಟೆಯಲ್ಲಿದ್ದ ಗಂಗೆಯನ್ನೇ ಧರೆಗೆ ಇಳಿಸಿದ ಕೀರ್ತಿ ಮಹರ್ಷಿ ಭಗೀರಥ ಅವರಿಗೆ ಸಲ್ಲುತ್ತದೆ ಎಂದು ಶ್ರೀ ಭಗೀರಥ ಉಪ್ಪಾರ ಸಂಘದ ಸದಸ್ಯ ಎಚ್.ಪಿ. ಸುನೀಲ್ ತಿಳಿಸಿದರು.
ಪಟ್ಟಣದ ಹೂವಿನ ಮಾರುಕಟ್ಟೆ ಸಮೀಪ ಗುರುವಾರ ತಾಲೂಕು ಶ್ರೀ ಭಗೀರಥ ಉಪ್ಪಾರ ಸಂಘದ ವತಿಯಿಂದ ಆಯೋಜಿಸಿದ್ದ ಶ್ರೀ ಭಗೀರಥ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀ ಮಹರ್ಷಿ ಭಗೀರಥರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಭಗೀರಥ ಅವರು ಒಬ್ಬ ಶ್ರೇಷ್ಠ ಗುರುಭಕ್ತರಾಗಿ, ಪುರಾಣ ಪುರುಷರಾಗಿ, ತಪೋನಿಷ್ಠೆಗೆ ಪ್ರಸಿದ್ಧರಾಗಿದ್ದರಿಂದ ಭಗೀರಥ ಪ್ರಯತ್ನ ಎಂಬ ನುಡಿ ಇಂದಿಗೂ ಪಸರಿಸುತ್ತಿದೆ. ಭೂಮಿಗೆ ಗಂಗೆ ತರುವಲ್ಲಿ ಕಠೋರ ತಪಸ್ಸು ಮಾಡಿದ ಭಗೀರಥರು ಸವಾಲು ಮತ್ತು ಸಮಸ್ಯೆಗಳಿಗೆ ಎಂದೂ ಎದೆಗುಂದದೆ ಸಮಾಜಕ್ಕೆ ಒಳಿತು ಮಾಡಲು ಪರಮಾತ್ಮನನ್ನು ಒಲಿಸಿಕೊಂಡರು. ಮನುಕುಲದ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹರ್ಷಿ ಭಗೀರಥರಂಥ ಮಹಾತ್ಮರ ಆದರ್ಶ ಮತ್ತು ತತ್ವಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದರು.
ತಾಲೂಕು ಶ್ರೀ ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಮಂಜೇಗೌಡ, ಉಪಾಧ್ಯಕ್ಷ ಕಿಟ್ಟಿ, ಗೌರವಾಧ್ಯಕ್ಷ ಮುತ್ತುರಾಜ್, ಪುರುಷೋತ್ತಮ್, ಚಂದು, ರವಿ, ರಾಘು, ಸುನೀಲ್, ಗಣೇಶ, ಶ್ರೀನಿವಾಸ, ಬಾಬು, ಮೋಹನ, ಪ್ರಶಾಂತ, ಎಚ್.ಬಿ. ಮಂಜು, ಎಚ್.ಪಿ. ರಾಘವೇಂದ್ರ, ರಾಜು, ರಾಜಣ್ಣ, ಬೆಟ್ಟಪ್ಪ, ನೇತ್ರಾ, ಹರೀಶ, ಪವಿತ್ರಾ, ಸೋಮ, ನಾರಾಯಣ, ಲತಾ, ರಾಧಾ, ಭಾಗ್ಯಾ, ಕೃಷ್ಣ, ಚಂದು ಇತರರು ಇದ್ದರು.