ಗಂಗೆಯನ್ನೇ ಧರೆಗಿಳಿಸಿದ ಭಗೀರಥ

bkt-17-5
ಭಗೀರಥ ಮಹರ್ಷಿ ಭಾವಚಿತ್ರ ಅದ್ದೂರಿ ಮೆರವಣಿಗೆ
Published on

ಬಾಗಲಕೋಟೆ:  ತಪಸ್ಸಿನ ಶಕ್ತಿಯಿಂದ ದೇವಲೋಕದ ಗಂಗೇಯನ್ನೇ ಧರೆಗಿಳಿಸಿದವರು ಭಗೀರಥ ಮಹರ್ಷಿ ಎಂದು ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಹೇಳಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದ ಅವರು ಭಗೀರತ ಮಹರ್ಷಿಯು ವರ್ಷಾನುಗಟ್ಟಲೇ ಒಂದೇ ಕಾಲಿನಲ್ಲಿ ನಿಂತು ಘೋರವಾದ ತಪಸ್ಸು ಮಾಡುವ ಮೂಲಕ ಶಕ್ತಿಯನ್ನು ಪಡೆದುಕೊಂಡವರು ಎಂದರು.

ತನ್ನ ಪೂರ್ವಜನರು ಕಪಿಲ ಮಹರ್ಷಿ ಕೋಪಕ್ಕೆ ತುತ್ತಾಗಿ ಭಸ್ಮವಾದದ್ದು, ಅವರಿಗೆ ಸದ್ಗತಿ ದೊರಕಿಸಲು ದೇವಗಂಗೆಯನ್ನು ಕರೆತರಲು ಭಗೀರಥ ಕಾಡಿಗೆ ಹೋಗಿ ದೀರ್ಗಕಾಲ ತಪಸ್ಸನ್ನು ಆರಂಭಿಸುವ ಮೂಲಕ ಗಂಗೆಯನ್ನು ಭೂಮಿಗೆ ತರಲು ತಂದಿದ್ದಾರೆ. ಇಂತಹ ಪರಿಶ್ರಮ, ಕಠಿಣ ನಿರ್ಣಯಗಳ ಮೂಲಕ ಜಯ ಸಾಧಿಸಬಹುದೆಂಬುದನ್ನು ಭಗೀರತ ತೋರಿಸಿಕೊಟ್ಟಿದ್ದಾರೆ. ಶಾಂತ ಸ್ವಭಾವ, ಸೌಜನ್ಯ ಧಾರ್ಮಿಕ ಅರ್ಹರಾದವರು ಉಪ್ಪಾರ ಸಮಾಜದವರು. ಧಾನ, ದರ್ಮ ಮಾಡುವ ಪ್ರವೃತ್ತಿ ಹೊಂದಿದ್ದವರು ಎಂದರು.

ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ ಮಾತನಾಡಿ ದೇವಗಂಗೆಯನ್ನು ಧರೆಗಿಳಿಸಬೇಕೆಂಬ ಸಂಕಲ್ಪ ಮಾಡಿದವರು ಭಗೀರತರಾಗಿದ್ದು, ಇದಕ್ಕಾಗಿ ಘೋರವಾದ ತಪಸ್ಸು ಮಾಡಿ ಗಂಗೇಯನ್ನು ಧರೆಗಳಿಸಿದವರು. ಇಂತಹ ಮಹಾಪುರುಷರ ಜಯಂತಿಯನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ಜಿ.ಪಂ ಮುಖ್ಯ ಯೋಜನಾಧಿಕಾರಿ ಪುನಿತ್ ಆರ್ ಮಾತನಾಡಿ ಮಹಾಪುರುಷರ ಜಯಂತಿಗೆ ಇಷ್ಟೊಂದು ಜನ ಸೇರಿದ್ದಿರುವುದು ಹೆಮ್ಮೆಯ ವಿಷಯವಾಗಿದೆ. ಸಮಾಜ ಶಿಕ್ಷಣ, ಸಂಘನೆಗಳ ಮೂಲಕ ಸಮಾಜದಲ್ಲಿ ಮುಂದುಬರಲು ಸಾಧ್ಯವಾಗುತ್ತದೆ ಎಂದರು.

ಉಪನ್ಯಾಸಕರಾಗಿ ಆಗಮಿಸಿದ್ದ ಸಂಗಮೇಶ ಉಪ್ಪಾರ ಮಾತನಾಡಿ ಭಗೀರತ ಮಹರ್ಷಿ ಜೀವನಕಥೆ ಸ್ಪೂರ್ತಿದಾಯಕವಾಗಿದ್ದು, ಕೋಸಲ ದೇಶದ ಸಗರನಿಗೆ ನೂರು ಅಶ್ವಮೇಧ ಯಾಗ ಮಾಡಿ ಇಂದ್ರ ಪದವಿ ಹೊಂದಬೇಕೆಂಬ ಹಂಬಲ ಉಂಟಾಗಿ ಕುದುರೆಯನ್ನು ಕಳುಹಿಸಿದಾಗ ದೇವೆಂದ್ರನು ವೇಷಬದಲಿಸಿ ಯಾಗದ ಕುದುರೆಯನ್ನು ಅಪಹರಿಸುತ್ತಾನೆ. ಕುದುರೆಯನ್ನು ಹುಡಕಲು ತನ್ನ 60 ಸಾವಿರ ಮಕ್ಕಳು ಬಿಟ್ಟಾಗ ಈಡೀ ಭೂಮಂಡಲನ್ನು ಹುಡುಕಿ ಕಪಿಲ ಮಹರ್ಷಿ ಆಶ್ರಮಕ್ಕೆ ತಲುಪಿದಾಗ ಕುದುರೆ ಅಪಹರಿಸಿದ್ದು, ಕಪಿಲ ಮುನಿಗಳು ಎಂದು ತಿಳಿದು ತಪಸ್ಸಿಗೆ ಭಂಗ ಮಾಡಿದಾಗ 60 ಸಾವಿರ ಮಕ್ಕಳು ಭಸ್ಮರಾಗುತ್ತಾರೆ. ಸದ್ಗತಿ ದೊರಕಿಸಲು ಸಾದ್ಯವಾಗದಾಗ ಚಿತಾಭಸ್ಮದ ಮೇಲೆ ಗಂಗೆ ಹರಿಸಿದಾಗ ಪಿತೃವರ್ಗಕ್ಕೆ ಸದ್ಗತಿ ಬರುತ್ತದೆ ಎಂದು ತಿಳಿಸಿದಾಗ ದಿಲೀಪನ ಮಗ ಭಗೀರಥನಿಂದ ಆಗಿರುವದನ್ನು ಎಲ್ಲರಿಗೂ ಮನಮುಟ್ಟುವಂತೆ ತಿಳಿಸಿದರು.

ಭಾಗವಾನಂದಗಿರಿ ಮುಡಾ ಶ್ರೀ, ಮುಡಾದೇವಪ್ರಸಾದ ಶ್ರೀ, ಶಿವಾನಂದ ಶ್ರೀ, ನಾಗೇಶ್ವರ ಚೈತನ್ಯ ಶ್ರೀಗಳು ಕಾರ್ಯಕ್ರಮದ ಧಿವ್ಯ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಂಕರ ತಿಮ್ಮಾಪೂರ, ಜಿ.ಪಂ ಯೋಜನಾ ನಿರ್ದೇಶಕ ಕಾಂಬಳೆ. ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ತಾ.ಪಂ ಇಓ ಸಂಪಗಾವಿ, ಲೋಕಾಪುರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಸೇರಿದಂತೆ ಸಮುದಾಯದ ಮುಖಂಡರಾದ ತಿಪ್ಪಣ್ಣ ತಿಪ್ಪಣ್ಣವರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net