ಆಟ-ಕಲಾತ್ಮಕ ಚಟುವಟಿಕೆಗಳಿಗೆ ಆದ್ಯತೆ

summer camp
ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿರುವ ಗ್ರಾಮೀಣ ಮಕ್ಕಳ ಬೇಸಿಗೆ ಉಚಿತ ಶಿಬಿರವನ್ನು ಬಲೂನ್ ಒಡೆಯುವ ಮೂಲಕ ಗ್ರಾಪಂ ಅಧ್ಯಕ್ಷೆ ಮಂಜುಳಾ ಶಿವಪ್ಪ ಹತ್ತಿಮರದ ಮಂಗಳವಾರ ಉದ್ಘಾಟಿಸಿದರು. ಗ್ರಾಪಂ ಸದಸ್ಯರಾದ ಭರತ್ ಕುಮಾರ್, ಮೆಹರಾಜ್, ಡಾ.ಪಂಚಾಕ್ಷರಿ, ಹೊನ್ನುರಬೀ, ಪಿಡಿಒ ಸುರೇಶ ಛಲವಾದಿ ಇತರರಿದ್ದರು.
Published on

ಗಂಗಾವತಿ: ಆಟೋಟ ಮತ್ತು ಕಲಾತ್ಮಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸಲಾಗುತ್ತಿದ್ದು, ಶಿಬಿರದ ಮೂಲಕ ಮಕ್ಕಳಲ್ಲಿ ಓದುವ ಮತ್ತು ಬರೆಯುವ ಹವ್ಯಾಸ ಹೆಚ್ಚಿಸಲಾಗುವುದು ಎಂದು ಗ್ರಾಪಂ ಅಧ್ಯಕ್ಷೆ ಮಂಜುಳಾ ಶಿವಪ್ಪ ಹತ್ತಿಮರದ ಹೇಳಿದರು.

ತಾಲೂಕಿನ ವಡ್ಡರಹಟ್ಟಿ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಗ್ರಾಪಂ ಮತ್ತು ಅರಿವು ಕೇಂದ್ರದಿಂದ ಹಮ್ಮಿಕೊಂಡಿರುವ ಗ್ರಾಮೀಣ ಮಕ್ಕಳ ಬೇಸಿಗೆ ಉಚಿತ ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಲು ಬೇಸಿಗೆ ಶಿಬಿರ ಸಹಕಾರಿಯಾಗಿದ್ದು, ಪ್ರತಿದಿನ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುವುದು. ಬೇಸಿಗೆಯಲ್ಲಿ ವೃಥಾ ಕಾಲಹರಣ ಮಾಡದೇ ಶಿಬಿರದಲ್ಲಿ ಪಾಲ್ಗೊಳ್ಳಬೇಕಿದ್ದು, ಪಾಲಕರು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಪಿಡಿಒ ಸುರೇಶ ಛಲವಾದಿ ಮಾತನಾಡಿ, ಮಕ್ಕಳನ್ನು ಪಠ್ಯೇತರ ಚಟುವಟಿಗಳತ್ತ ಪ್ರೇರೇಪಿಸಲು ಸಂಪನ್ಮೂಲ ವ್ಯಕ್ತಿಗಳಿಂದ ಶಿಬಿರ ಆಯೋಜಿಸಿದ್ದು, ಏ.29ರಿಂದ ಮೇ 13ರವರೆಗೆ ನಿರಂತರ ನಡೆಯಲಿದೆ. ಈಗಾಗಲೇ 40 ಮಕ್ಕಳು ನೋಂದಾಯಿಸಿದ್ದು, ವಿಭಿನ್ನ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಕಲಿಕಾನುಭವ ನೀಡಲಾಗುತ್ತಿದೆ ಎಂದರು.

ಶಿಬಿರದಲ್ಲಿ ಚಿಣ್ಣರಿಗೆ ಸಜನಾತ್ಮಕ ಚಟುವಟಿಕೆ, ಗಟ್ಟಿ ಓದು, ಪತ್ರ ಬರೆಯುವುದು, ಗಣಿತ ವಿಷಯಕ್ಕೆ ಸಂಬಂಧಿಸಿದ ಚಟುವಟಿಕೆ, ಚೆಸ್, ಕ್ರಾಪ್ಟ್ ಚಟುವಟಿಕೆ, ಕಥೆ ಹೇಳುವುದು, ಮಕ್ಕಳಿಂದ ಕಥೆ ಹೇಳಿಸುವುದು ಸೇರಿ ಸಂಪನ್ಮೂಲ ವ್ಯಕ್ತಿಗಳಿಂದ ಉಪಯುಕ್ತ ಮಾಹಿತಿ ನೀಡಲಾಗುತ್ತಿದೆ.

ಗ್ರಾಪಂ ಸದಸ್ಯರಾದ ಭರತ್ ಕುಮಾರ್, ಮೆಹರಾಜ್, ಬಂಡೇ ನಾಯಕ, ಡಾ.ಪಂಚಾಕ್ಷರಿ, ಹೊನ್ನುರಬೀ, ಶಾಂತಮ್ಮ, ಸಹಿಪ್ರಾ ಶಾಲೆ ಮುಖ್ಯಶಿಕ್ಷಕ ಸದಾನಂದ, ಸಂಪನ್ಮೂಲ ವ್ಯಕ್ತಿ ಸಿದ್ದಲಿಂಗೇಶ ಪೂಲಭಾವಿ, ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ, ಆರ್‌ಜಿಪಿಆರ್ ೆಲೋ ಸುಮಿತ್ರಾ ಮೆಣಸಿನಕಾಯಿ, ಎಸ್‌ಬಿಐ ಬ್ಯಾಂಕ್ ಆರ್ಥಿಕ ಸಲಹೆಗಾರರಾದ ಟಿ. ಆಂಜನೇಯ ನಾಯಕ, ಗ್ರಂಥಾಲಯ ಮೇಲ್ವಿಚಾರಕ ವೀರೇಶ ಗಣೇಕಲ್, ಮುಖಂಡ ಶಿವಪ್ಪ ಹತ್ತಿಮರದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net