ಗಂಗಾರತಿ ಮಾದರಿಯಲ್ಲಿ ಕೃಷ್ಣಾರತಿ

6Ndr2
Published on

ನಂದೇಶ್ವರ: ದೇಶದ ನದಿಗಳಿಗೆ ಅತ್ಯಂತ ಪವಿತ್ರ ಸ್ಥಾನವಿದೆ. ಉತ್ತರ ಭಾರತದಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲಿ ಕೃಷ್ಣಾರತಿ ಕಾರ್ಯಕ್ರಮ ಆಯೋಜಿಸುವುದರಿಂದ ಎಲ್ಲರಿಗೂ ಪುಣ್ಯ ಪ್ರಾಪ್ತವಾಗಲಿದೆ ಎಂದು ಉತ್ತರ ಪ್ರದೇಶದ ದೇವಗಿರಿ ಬಾಬಾ ಹೇಳಿದರು.

ಸಮೀಪದ ಹಿಪ್ಪರಗಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ೨ನೇ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಹಿಪ್ಪರಗಿಯಲ್ಲಿ ಆ.೧೬ರಂದು ಜರುಗಲಿರುವ ಕಾರ್ಯಕ್ರಮದಲ್ಲಿ ಉತ್ತರ ಭಾರತದ ನೂರಾರು ನಾಗಾ ಸಾಧು, ಅಘೋರಿ, ತಪಸ್ವಿ, ಸಾಧಕರು ಪಾಲ್ಗೊಳ್ಳಲಿದ್ದಾರೆ. ಆದ್ದರಿಂದ ಎಲ್ಲರೂ ಭಾಗವಹಿಸಬೇಕು ಎಂದರು.

ನಿರಾಣಿ ಉದ್ಯಮ ಸಮೂಹದ ಕಾರ್ಯ ನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಮಾತನಾಡಿದರು.ಪ್ರಭೂಜಿ ಮಹಾರಾಜರು, ಪುಂಡಲೀಕ ಪಾಲಭಾವಿ, ಸೋಮನಾಥಗೌಡ ಪಾಟೀಲ, ಮಲ್ಲಪ್ಪ ಹಂಚಿನಾಳ, ಶಂಕರ ಪಾಟೀಲ, ರಾಮಣ್ಣ ಹಿಪ್ಪರಗಿ, ಬಸವರಾಜ ದಲಾಲ, ಕಾಶಿನಾಥ ಜನಗೊಂಡ, ಈಶ್ವರ ನ್ಯಾಮಗೌಡ ಇತರರಿದ್ದರು. ವೆಂಕಟೇಶ ಜಂಬಗಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net