

ಶ್ರೀರಂಗಪಟ್ಟಣ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಶಿವನ ದೇವಾಲಯಗಳಲ್ಲಿ ಜಾಗರಣೆಯೊಂದಿಗೆ ಸಾವಿರಾರು ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.
ಶ್ರೀ ಗಂಗಾಧರೇಶ್ವರ ದೇಗುಲದಲ್ಲಿ ಪಲ್ಲಕ್ಕಿ ಉತ್ಸವ, ಮೆರವಣಿಗೆ ನಡೆಸಲಾಯಿತು. ಭಾನುವಾರ ಮಾರ್ಕಂಡೇಯ ಮಂಟಪದಲ್ಲಿ ಆರಾಧನೆಯೊಂದಿಗೆ ವಿಶೇಷ ರಥದಲ್ಲಿ ಪಟ್ಟಣದ ರಾಜಪಥಗಳಲ್ಲಿ ರಥೋತ್ಸವ ನಡೆಯಿತು. ಜ್ಯೋತಿಮಹೇಶ್ವರ, ಚಂದ್ರಮೌಳೇಶ್ವರ, ಶನೈಶ್ಚರ, ಬಾಬುರಾಯನಕೊಪ್ಪಲು ಗ್ರಾಮದ ಶ್ರೀಕಾಶಿ ವಿಶ್ವನಾಥ, ಕೂಡಲಕುಪ್ಪೆ ಗ್ರಾಮದ ಶನೈಶ್ಚರಸ್ವಾಮಿ, ಮರಳಗಾಲದ ಮರಡಿಲಿಂಗೇಶ್ವರಸ್ವಾಮಿ, ಮಂಡ್ಯದಕೊಪ್ಪಲು ಸಮೀಪದ ಕಾವೇರಿ ಬೋರೇದೇವರ ಗುಡಿ, ಬಲ್ಲೇನಹಳ್ಳಿ ಗ್ರಾಮದ ಚಂದ್ರಮೌಳೇಶ್ವರ, ಬಸವಲಿಂಗೇಶ್ವರ, ಚಂದಗಾಲು ಹೊಸೂರು ಗ್ರಾಮದ ಶ್ರೀಮಹದೇಶ್ವರ, ಪಾಲಹಳ್ಳಿ ಗ್ರಾಮದ ಶ್ರೀ ಶಂಭುಲಿಂಗೇಶ್ವರ, ಆಲಗೂಡಿನ ಸಿದ್ದೇಶ್ವರ, ಪಿ.ಹೊಸಹಳ್ಳಿ ಮಹದೇಶ್ವರ, ಬಲಮುರಿಯ ಅಗಸ್ತೇಶ್ವರ ದೇವಾಲಯಗಳಲ್ಲಿ ವಿಶೇಷ ಅಭಿಷೇಕ, ಹೂವಿನ ಅಲಂಕಾರ ಮಾಡಲಾಗಿತ್ತು.