

ಯಾದಗಿರಿ: ಸಿದ್ಧಿ ಪುರುಷ ಸದ್ಗುರು ಶ್ರೀ ವಿಶ್ವಾರಾಧ್ಯರ ಜನ್ಮಕ್ಷೇತ್ರ ಕಲಬುರಗಿ ಜಿಲ್ಲೆ ಜೇವಗರ್ಿ ತಾಲೂಕಿನ ಗಂವ್ಹಾರದಿಂದ ಅಬ್ಬೆತುಮಕೂರಿಗೆ ಶ್ರೀ ಡಾ.ಗಂಗಾಧರ ಸ್ವಾಮೀಜಿ ನೇತೃತ್ವದಲ್ಲಿ ಪರಂಪರಾ ಪಾದಯಾತ್ರೆ ಆ.14ರಂದು ಆರಂಭಗೊಳ್ಳಲಿದೆ.
ಅಂದು ಬೆಳಗ್ಗೆ ಗಂವ್ಹಾರದಲ್ಲಿ ಕಾಶಿ ಪೀಠದ 65ನೇ ಜಗದ್ಗುರು ಬನ್ನಿಬಸವೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸಿದ ನಂತರ ಮಧ್ಯಾಹ್ನ 1ಕ್ಕೆ ಸಕಲ ಮಂಗಲ ವಾದ್ಯಗಳೊಂದಿಗೆ ಅಮೃತೇಶ್ವರ ಮಂದಿರದಿಂದ ಪೂಜ್ಯರ ದರ್ಶನ, ಪ್ರಸಾದ ಪಡೆದು ವಿಶ್ವಾರಾಧ್ಯರ ಜನ್ಮಭೂಮಿ ಪಂಚಗೃಹ ತೋಪಕಟ್ಟಿ ಹಿರೇಮಠದಿಂದ ಕಳಸ, ಕನ್ನಡಿಯೊಂದಿಗೆ ಪಾದಯಾತ್ರೆ ಹೊರಡಲಿದೆ.
ಗ್ರಾಮದ ಸೀಮಾಂತರದಲ್ಲಿ ಹಿರಿಯರಾದ ಚನ್ನಪ್ಪ ಸಾಹು ಬಿರೆದಾರ ಹೊಲದಲ್ಲಿ ನಿಮರ್ಿಸಿದ ಗುರು ಮಂಟಪದಲ್ಲಿ ಶ್ರೀಗಳಿಗೆ ಪಾದಪೂಜೆ ನೆರವೇರಲಿದೆ. ಅಲ್ಲಿ ಎಲ್ಲ ಭಕ್ತಗಣ ಪ್ರಸಾದ ಸ್ವೀಕರಿಸಿದ ಬಳಿಕ ಹೊರಡುವ ಪಾದಯಾತ್ರೆ ಮಾರ್ಗಮಧ್ಯೆ ಅಲ್ಲಲ್ಲಿ ಭಕ್ತರ ವಿಶ್ರಾಂತಿ ಕಟ್ಟೆಯಲ್ಲಿ ಪಾದಪೂಜೆ ಮುಗಿಸಿಕೊಂಡು ಅಣಬಿ ಗ್ರಾಮ ತಲುಪಲಿದೆ. ಭಕ್ತರು ಪಾದಯಾತ್ರೆಯನ್ನು ಸಂಭ್ರಮದಿಂದ ಬರಮಾಡಿಕೊಂಡು ಶ್ರೀಗಳ ಪಾದಪೂಜೆ ಮಾಡುವರು.
ಶಹಾಪುರ ತಾಲೂಕಿನ ಶಿರವಾಳ ತಲುಪಲಿದ್ದು, ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಸಂಪನ್ನಗೊಳಿಸಿದ ನಂತರ ಹುರಸಗುಂಡಗಿ ಮುಖಾಂತರ ಸನ್ನತಿಯ ಶ್ರೀ ಚಂದ್ರಲಾ ಪರಮೇಶ್ವರಿ ದೇವಸ್ಥಾನ ಪ್ರವೇಶಿಸಲಿದೆ. ಅಲ್ಲಿ ಶ್ರೀಗಳು ದೇವಿಗೆ ವಿಶೇಷ ಪೂಜೆ ನೆರವೇರಿಸಿದ ನಂತರ ಎಲ್ಲರೂ ಪ್ರಸಾದ ಸ್ವೀಕರಿಸಿ ವಾಸ್ತವ್ಯ ಹೂಡುವರು.
2ನೇ ದಿನದ ಪಾದಯಾತ್ರೆ ಕನಗಾನಹಳ್ಳಿ ಮಾರ್ಗವಾಗಿ ಊಳವಂಡಗೇರಾ ಗ್ರಾಮದಲ್ಲಿ ಭಕ್ತರಿಂದ ಪಾದಪೂಜೆ ನೆರವೇರಿದ ಬಳಿಕ ಪ್ರಸಾದ ಸ್ವೀಕರಿಸಲಾಗುವುದು. ಅಲ್ಲಿಂದ ಮುಂದೆ ಸಾಗುವ ಪಾದಯಾತ್ರೆ ಬನ್ನೆಟ್ಟಿ ದಾಟಿದ ನಂತರ ಶ್ರೀ ವಿಶ್ವಾರಾಧ್ಯರ ದರ್ಶನ ಕಟ್ಟೆಯಲ್ಲಿ ಕೆಲಕಾಲ ವಿಶ್ರಾಂತಿ ಪಡೆಯಲಿದೆ. ನಂತರ ತಳಕ ಗ್ರಾಮ ದೇವತೆ ಹಾಗೂ ವೀರಾಂಜನೇಯ ಸ್ವಾಮಿ ಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಿ ಹೆಡಗಿಮದ್ರಾ ತಲುಪಿ ಶ್ರೀ ಶಾಂತಶಿವಯೋಗಿಗಳ ಮಠದಲ್ಲಿ ವಾಸ್ತವ್ಯ ಹೂಡಲಿದೆ.
3ನೇ ದಿನ ಠಾಣಾಗುಂದಿ ಮೂಲಕ ಪಾದಗಟ್ಟೆಯಿಂದ ಶ್ರೀಮಠಕ್ಕೆ ಬೃಹತ್ ಮೆರವಣಿಗೆ ಮೂಲಕ ಶ್ರೀಗಳು ತೆರಳಲಿದ್ದಾರೆ. ಕನರ್ಾಟಕ, ತೆಲಂಗಾಣ, ಆಂಧ್ರ, ಮಹಾರಾಷ್ಟ್ರದ ಅಸಂಖ್ಯ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಶಾಂತಿ, ಸೌಹಾರ್ದದಿಂದ ನಡೆಯುವ ಭಕ್ತಿಯ ಈ ಪಾದಯಾತ್ರೆ ಎಲ್ಲರೂ ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುವ ಮೂಲಕ ವಿಶ್ವಾರಾಧ್ಯರ ಕೃಪೆಗೆ ಪಾತ್ರರಾಗಲು ಶ್ರೀಮಠದ ವಕ್ತಾರ ಡಾ.ಸುಭಾಶ್ಚಂದ್ರ ಕೌಲಗಿ ಕೋರಿದ್ದಾರೆ.