ಗಂಗಾಧರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ

02.HBH. 4
Published on

ಹಗರಿಬೊಮ್ಮನಹಳ್ಳಿ: ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಸತತ ಮೂರನೇ ಬಾರಿ ಬಿ.ಗಂಗಾಧರ ಹಾಗೂ ಉಪಾಧ್ಯಕ್ಷರಾಗಿ ವಕೀಲ ಚಂದ್ರಶೇಖರ್ ಅವಿರೋಧವಾಗಿ ಭಾನುವಾರ ಆಯ್ಕೆಯಾದರು. ತಹಸೀಲ್ದಾರ್ ಆರ್.ಕವಿತಾ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಬ್ಯಾಂಕ್ 12 ಸದಸ್ಯ ಬಲ ಹೊಂದಿದ್ದು, ಒಂಬತ್ತು ಸ್ಥಾನಗಳಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಬೆಂಬಲಿತರು ಹಾಗೂ ಮೂರು ಜನ ಕಾಂಗ್ರೆಸ್ ಬೆಂಬಲಿತರು ಗೆದ್ದಿದ್ದರು. ಉಲವತ್ತಿ ಕೆ.ರಾಘವೇಂದ್ರ ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದಾರೆ. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಬಳಿಕ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.

ನಿರ್ದೇಶಕರಾದ ಎಂ.ಶಾಂತಾ, ಗುಡೇದ್ ಬಸವರಾಜ್, ಶೇಖರ್ ನಾಯ್ಕ, ಮಂಜುನಾಥ, ಆನಂದಳ್ಳಿ ಶಿವಾನಂದ, ಪೂಜಾರ್ ವೆಂಕಟೇಶ, ಹರಾಳ್ ರತ್ನಮ್ಮ, ಪುರಸಭೆ ಸದಸ್ಯ ದೀಪಕ್ ಕಠಾರಿ, ಮಾಜಿ ಸದಸ್ಯ ಕೆ.ಲಕ್ಷ್ಮಣ್, ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ತಾ.ಪಂ.ಮಾಜಿ ಸದಸ್ಯ ರುದ್ರಮುನಿ, ಪ್ರಮುಖರಾದ ಕಿನ್ನಾಳ್ ಸುಭಾಷ್, ಕನ್ನಿಹಳ್ಳಿ ಚಂದ್ರಶೇಖರ್, ಚಿತ್ತವಾಡ್ಗಿ ಪ್ರಕಾಶ್, ಬ್ಯಾಂಕ್ ಮ್ಯಾನೇಜರ್ ಶಿವಕವಿ ತಿಪ್ಪೇಸ್ವಾಮಿ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net