ಖೂಬಾರದಿಂದ ಶ್ಲಾಘನೀಯ ಕಾರ್ಯ

prakash khandre
Published on

ಭಾಲ್ಕಿ: ಜಿಲ್ಲೆಯಲ್ಲಿ ಹಿಂದೆಂದೂ ಆಗದಂತಹ ಅಭಿವೃದ್ಧಿ ಕಾರ್ಯಗಳು ಸಂಸದ ಭಗವಂತ ಖೂಬಾವರ ಅವಧಿಯಲ್ಲಿ ಆಗಿವೆ. ಬೀದರ್ ಕ್ಷೇತ್ರದಲ್ಲಿ ಖೂಬಾ ಅವರ ಕಾರ್ಯಕ್ಷಮತೆ ಮೆಚ್ಚಿ, ಕೇಂದ್ರ ಸಚಿವ ಸ್ಥಾನ ನೀಡಲಾಗಿದೆ ಎಂದು ಮಾಜಿ ಶಾಸಕ ಪ್ರಕಾಶ ಖಂಡ್ರೆ ಹೇಳಿದರು.

ಭಗವಂತ ಖೂಬಾ ಅವರು ಜಿಲ್ಲೆಯ ಜನರು ನಿತ್ಯ ರಾಜ್ಯ, ರಾಷ್ಟçದ ಪ್ರತಿಷ್ಠಿತ ನಗರಕ್ಕೆ ಸಂಚರಿಸುವ ಹಲವು ವಿಶೇಷ ರೈಲುಗಳ ವ್ಯವಸ್ಥೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಕೇಂದ್ರದಿಂದ ಹಿಂದೆಂದೂ ಆಗದಂತಹ ಕಾರ್ಯ ಮಾಡಿದ್ದಾರೆ. ಸೈನಿಕ ಶಾಲೆ, ಸಿಪೆಟ್, ವಿಮಾನ ನಿಲ್ದಾಣ ಸೇರಿ ಕೇಂದ್ರದ ಹಲವು ಯೋಜನೆ ತಂದಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಕಾರ್ಯಗಳನ್ನು ಶರವೇಗದಲ್ಲಿ ಪೂರ್ಣಗೊಳಿಸಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೇಶ ಸ್ವಾತಂತ್ರ್ಯವಾದಾಗಿನಿಂದ ಜಿಲ್ಲೆಗೆ ಕೇಂದ್ರ ಸಚಿವ ಸ್ಥಾನ ದೊರಕಿಲ್ಲ. ಆದರೆ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಭಗವಂತ ಖೂಬಾ ಮಂತ್ರಿ ಸ್ಥಾನ ಪಡೆದಿದ್ದಾರೆ. ಇವರು ಮತ್ತೊಮ್ಮೆ ನಮ್ಮ ಜಿಲ್ಲೆ ಸಂಸದರಾಗಬೇಕು ಎಂದರು. ಪ್ರಮುಖರಾದ ಬಾಬುರಾವ ಧೂಪೆ, ದಿನಕರ ದೇಶಪಾಂಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net