ಖೂಬಾ ಪರಿವಾರದಿಂದ ₹ 11 ಲಕ್ಷ ದೇಣಿಗೆ

dinada chitra1
Published on

ಬೀದರ್: ಶ್ರೀರಾಮ ಮಂದಿರಕ್ಕಾಗಿ ಸಂಸದ ಭಗವಂತ ಖೂಬಾ ಮತ್ತವರ ಪರಿವಾರ 11 ಲಕ್ಷ ರೂ. ದೇಣಿಗೆ ನೀಡಿದೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಪ್ರಮುಖರಾದ ಹಣಮಂತರಾವ ಪಾಟೀಲ್, ನಾಗೇಶರೆಡ್ಡಿ ಸಮ್ಮುಖದಲ್ಲಿ ಖೂಬಾ ಬುಧವಾರ ನಗರದಲ್ಲಿ 11 ಲಕ್ಷದ ಚೆಕ್ ಅನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಸಮರ್ಪಿಸಿದರು.

ಈ ವೇಳೆ ಮಾತನಾಡಿದ ಸಂಸದ ಖೂಬಾ, ಒಬ್ಬರು ದೇಣಿಗೆ ನೀಡದೆ ಕುಟುಂಬ ಸದಸ್ಯರೆಲ್ಲರೂ ಕುಳಿತು ಚರ್ಚಿಸಿ ದೇಣಿಗೆ ನೀಡುವುದು ಉತ್ತಮ. ಕುಟುಂಬದ ಪ್ರತಿ ಸದಸ್ಯರಿಗೆ ನಾನು ಸಹ ಕೈಲಾದಷ್ಟು ದೇಣಿಗೆ ನೀಡಿದ್ದೇನೆಂಬ ಭಾವನೆ ಬರುವ ನಿಟ್ಟಿನಲ್ಲಿ ಖೂಬಾ ಪರಿವಾರ 11 ಲಕ್ಷ ರೂ. ದೇಣಿಗೆ ಸಮರ್ಪಿಸಿದೆ ಎಂದರು.

ಮಂದಿರಕ್ಕಾಗಿ ಕನಿಷ್ಠ 10 ರೂ. ಸಹ ದೇಣಿಗೆ ನೀಡಬಹುದು. ಈ ಕಾರ್ಯಕ್ಕೆ ಪ್ರತಿಯೊಬ್ಬರೂ ಸ್ಪಂದಿಸುವಂತೆ ಖೂಬಾ ಕೋರಿದರು. ಪ್ರಮುಖರಾದ ಡಾ.ಶೈಲೇಂದ್ರ ಬೆಲ್ದಾಳೆ, ಜೈಭೀಮ ಸೋಲಾಪುರೆ, ಪ್ರಕಾಶ ಟೊಣ್ಣೆ, ಹಣಮಂತ ಖೂಬಾ, ಜಗದೀಶ ಖೂಬಾ, ಶಿವರಾಜ ಹಲಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net