ಖೂಬಾ ನಡೆ ಯಾವ ಪಕ್ಷದ ಕಡೆ?

Capture
Published on

ಬಸವಕಲ್ಯಾಣ: ಕಳೆದ ವರ್ಷ ನಡೆದ ಉಪ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳದೇ ಪಕ್ಷೇತರರಾಗಿ ಸ್ಪಧರ್ಿಸಿ ಎಲ್ಲರ ಜತೆಗೆ ಅಂತರ ಕಾಯ್ದುಕೊಂಡಿದ್ದ ಮಾಜಿ ಶಾಸಕ ಮಲ್ಲಿಕಾಜರ್ುನ ಖೂಬಾ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದಂತಿದೆ.

ವಿಧಾನಸಭೆ ಚುನಾವಣೆ ಎದುರಾಗುತ್ತಿರುವ ಹೊತ್ತಿನಲ್ಲಿ ಖೂಬಾ ಅವರು ಕಾಂಗ್ರೆಸ್ ಕಡೆ ವಾಲುತ್ತಿರುವ ಲಕ್ಷಣಗಳು ಗೋಚರಿಸಿವೆ. ಬುಧವಾರ ಬೆಂಗಳೂರನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಅವರು ಗುರುವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭೇಟಿಯಾಗಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ತೆರಳಿ ಕೈ ನಾಯಕರ ಜತೆಗೆ ಚಚರ್ಿಸಿರುವುದು ಕಾಂಗ್ರೆಸ್ ಕಡಗೆ ಖೂಬಾ ನಡಿಗೆ ಇಟ್ಟಿರುವ ಸ್ಪಷ್ಟ ಸಂದೇಶ ರವಾನಿಸಿದೆ. ಇದು ಕ್ಷೇತ್ರದ ರಾಜಕೀಯ ವಲಯದಲ್ಲಿ ಚಚರ್ೆಗೆ ಕಾರಣವಾಗಿದೆ.

ಖೂಬಾ ಅವರು ಕೈ ಮುಖಂಡರಿಗೆ ಭೇಟಿ ಮಾಡಿ ಕ್ಷೇತ್ರದ ಪ್ರಸಕ್ತ ರಾಜಕೀಯ ವಿದ್ಯಮಾನ ಕುರಿತು ಚಚರ್ೆ ನಡೆಸಿದ್ದಾರೆ. ಬಿಜೆಪಿ ಪಾಳಯದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ-ಶಾಸಕ ಶರಣು ಸಲಗರ ನಡುವೆ ನಡೆದಿರುವ ಹಾದಿ ಜಗಳದ ಕುರಿತು ಸಹ ಚಚರ್ೆ ಮಾಡಿದ್ದಾರೆ. ಇದಾದ ಬಳಿಕದ ಬೆಳವಣಿಗೆ ಕುರಿತು ಸಮಾಲೋಚಿಸಿದ್ದಾರೆ ಎನ್ನಲಾಗಿದೆ. ಡಿಕೆಶಿ, ಸಿದ್ದರಾಮಯ್ಯ ಅವರಿಗೆ ಭೇಟಿ ಮಾಡಿ ಚಚರ್ಿಸಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಶೀಘ್ರ ಖೂಬಾ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಬಗ್ಗೆ ಅವರ ಆಪ್ತರು ಚಚರ್ೆ ನಡೆಸುತ್ತಿದ್ದಾರೆ.

ಕಳೆದ ವರ್ಷ ನಡೆದ ಉಪ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಖೂಬಾಗೆ ಟಿಕೆಟ್ ಕೈತಪ್ಪಿದ್ದರಿಂದ ಸ್ವತಂತ್ರ ಅಭ್ಯಥರ್ಿಯಾಗಿ ಸ್ಪಧರ್ಿಸಿ ಸೋತಿದ್ದರು. ನಂತರ ಪಕ್ಷ ರಾಜಕೀಯದಿಂದ ದೂರ ಉಳಿದಿದ್ದರು. ವಿಧಾನಸಭೆ ಚುನಾವಣೆ ಹತ್ತಿರ ಆದಂತೆಯೇ ಕಾಂಗ್ರೆಸ್ ಕದ ತಟ್ಟುತ್ತಿರುವುದು ಮಹತ್ವ ಪಡೆದಿದೆ.

ಇತ್ತೀಚೆಗೆ ನಡೆದ ಅವರ ಜನ್ಮ ದಿನಾಚರಣೆ ಸಂದರ್ಭದಲ್ಲಿ ಮುಂದಿನ ಚುನಾವಣೆಗೆ ಸ್ಪಧರ್ಿಸುವುದು ಖಚಿತ. ಆದರೆ ಯಾವ ಪಕ್ಷ ಸೇರಬೇಕು ಎನ್ನುವುದು ನಿರ್ಧರಿಸಿಲ್ಲ. ಜನರ ನಿರ್ಣಯವೇ ನನ್ನ ತೀಮರ್ಾನ. ಜನತೆ ಹಾಗೂ ಹಿತೈಷಿಗಳೊಂದಿಗೆ ಚಚರ್ಿಸಿ ಯಾವ ಪಕ್ಷ ಸೇರಬೇಕು ಎನ್ನುವದನ್ನು ಶೀಘ್ರದಲ್ಲಿ ನಿರ್ಧರಿಸುತ್ತೇನೆ ಎಂದು ಹೇಳಿದ್ದರು. ಇದಾದ ಬಳಿಕ ಕಾಂಗ್ರೆಸ್ ಮುಖಂಡರ ಭೇಟಿ ನಡೆದಿದ್ದು, ಗಮನಾರ್ಹ ಎನಿಸಿದೆ.

ಸಾಕಷ್ಟು ಏಳು-ಬೀಳು: ಬಸವಕಲ್ಯಾಣ ಉಪ ಚುನಾವಣೆ ಸೇರಿ ಐದು ಸಲ ಸ್ಪಧರ್ಿಸಿರುವ ಮಲ್ಲಿಕಾಜರ್ುನ ಖೂಬಾ ಅವರು, ಎರಡು ಸಲ ಜೆಡಿಎಸ್ನಿಂದ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಮೂರು ಸಲ ಜೆಡಿಎಸ್, ಒಮ್ಮೆ ಬಿಜೆಪಿ ಮತ್ತು ಒಮ್ಮೆ ಪಕ್ಷೇತರರಾಗಿ ಸ್ಪಧರ್ಿಸಿದ್ದಾರೆ. ಎರಡು ಗೆಲುವು, ಮೂರು ಸಲ ಸೋಲು ಕಂಡಿದ್ದಾರೆ. 2004 ಮತ್ತು 2013ರಲ್ಲಿ ಜೆಡಿಎಸ್ನಿಂದ ಶಾಸಕರಾಗಿದ್ದ ಖೂಬಾ, ಇದೇ ಪಕ್ಷದಿಂದ 2008ರಲ್ಲಿ ಸೋಲು ಕಂಡಿದ್ದರು. 2018ರಲ್ಲಿ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಸೇರಿ ಸ್ಪಧರ್ಿಸಿ ಸೋಲು ಕಂಡಿದ್ದರು. ಇವರು ಕ್ಷೇತ್ರದ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿರುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net