ಖಿಳೇಗಾಂವದಲ್ಲಿ ಕೊಲೆ ಆರೋಪಿ ಬಂಧನ

14KOKATANUR-2-Web
Published on

ಕೊಕಟನೂರ: ಅಥಣಿ ತಾಲೂಕಿನ ಖಿಳೇಗಾಂವ ಗ್ರಾಮದ ಸರಹದ್ದಿನಲ್ಲಿ ಈಚೆಗೆ ವ್ಯಕ್ತಿಯೋರ್ವನನ್ನು ಜು.12ರಂದು ಕಲ್ಲಿನಿಂದ ಜಜ್ಜಿ ಕೊಲೆಗೈದ ಆರೋಪಿಯನ್ನು ಅಥಣಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಕವಟೆಮಹಂಕಾಳ ತಾಲೂಕಿನ ಕರಲಹಟ್ಟಿ ಗ್ರಾಮದ ಸುಯೋಗ ಭೀಮಸೇನ ಶೇಜಾಳ (29) ಬಂಧಿತ. ಅದೇ ಗ್ರಾಮದ ಅರುಣ ಪಾಂಡುರಂಗ ಮಾನೆ (31) ಎಂಬಾತನನ್ನು ಹಣಕಾಸಿನ ವ್ಯವಹಾರದ ವೈಮನಸ್ಸಿನ ಹಿನ್ನೆಲೆಯಲ್ಲಿ ಕಲ್ಲಿನಿಂದ ಜಜ್ಜಿ ಏತ ನೀರಾವರಿ ಮುಖ್ಯ ಕಾಲುವೆ ಪಕ್ಕ ಎಸೆದು ಹೋಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅರುಣನ ತಾಯಿ ಅಂಜನಾ ಪಾಂಡುರಂಗ ಮಾನೆ ಅವರು ಸೋಮವಾರ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅಥಣಿ ಸಿಪಿಐ ಶಂಕರಗೌಡ ಬಸನಗೌಡರ ಮಾರ್ಗದರ್ಶನದಲ್ಲಿ ಪಿಎಸ್‌ಐ ಕುಮಾರ ಹಾಡಕಾರ ನೇತೃತ್ವದ ತಂಡ ದಾಳಿ ನಡೆಸಿ ಖಿಳೇಗಾಂವ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net