

ತಿ.ನರಸೀಪುರ: ಪಟ್ಟಣದ ಪುರಸಭಾ ವ್ಯಾಪ್ತಿಯ 1ನೇ ಬ್ಲಾಕ್‌ನ ಹಳೇ ತಿರುಮಕೂಡಲಿನ ಚೌಡೇಶ್ವರಿ ದೇವಸ್ಥಾನದ ಮುಂಭಾಗ ಕೊಂಡದ ಜಾಗವನ್ನು ಖಾಸಗಿ ವ್ಯಕ್ತಿಗೆ ಅಕ್ರಮವಾಗಿ ಖಾತೆ ಮಾಡಿರುವುದನ್ನು ರದ್ದುಪಡಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಪುರಸಭಾ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ದೇವಸ್ಥಾನದ ಮುಂಭಾಗದಲ್ಲಿರುವ ಖಾತೆ ಸಂಖ್ಯೆ 140ರ ಖಾಲಿ ನಿವೇಶನ ದೇವಸ್ಥಾನಕ್ಕೆ ಸೇರಿದ್ದು, ಪುರಸಭಾ ಅಧಿಕಾರಿಗಳು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಸದರಿ ಜಾಗಕ್ಕೆ ಸುಧೀರ್ ಎಂಬ ವ್ಯಕ್ತಿಯ ಹೆಸರಿಗೆ ಇ-ಸ್ವತ್ತು ನೀಡಿ, ಖಾತೆ ಮಾಡಿ ಬೇರೆ ಖಾತೆ ಸಂಖ್ಯೆಯನ್ನು ನೀಡಿರುತ್ತಾರೆ ಎಂದು ಆರೋಪಿಸಿದರು.
ಮುಖಂಡ ಕರಿಯಪ್ಪ, ಅಕ್ರಮವಾಗಿ ಆಗಿರುವ ಖಾತೆಯನ್ನು ರದ್ದುಪಡಿಸದಿದ್ದಲ್ಲಿ ಪುರಸಭೆ ಮುಖ್ಯಾಧಿಕಾರಿ ಮತ್ತು ಖಾತೆ ಮಾಡಿಸಿಕೊಂಡಿರುವ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭ ಯ.ಚಂದ್ರೇಗೌಡ, ನಟರಾಜು, ರಮೇಶ್, ನಾಗರಾಜು, ಕೇಬಲ್ ಮಣಿಕಂಠ, ಸುನಿಲ್, ನವೀನ, ವಿನೋದ, ಸ್ವಾಮಿ, ಚೇತನ್,ಪುಟ್ಟ, ಕುಮಾರ್, ಮಹೇಶ್, ಉಮೇಶ್, ಪ್ರದೀಪ್, ರವಿ, ಗಣೇಶ್, ಗುಂಡ, ಪ್ರಶಾಂತ್, ವಾಸು, ನಂದೀಶ್ ಹಾಜರಿದ್ದರು.