ಖಾಸಗಿ ಸ್ವತ್ತಿನಲ್ಲಿ ಪುರಸಭೆ ಕಟ್ಟಡ ನಿರ್ಮಾಣ?

28HUKKERI1
Published on

ಹುಕ್ಕೇರಿ: ಇಲ್ಲಿನ ಪುರಸಭೆ ಕಚೇರಿ ಕಟ್ಟಡವನ್ನು ಖಾಸಗಿ ಮಾಲೀಕತ್ವದ ನಿವೇಶನದಲ್ಲಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಮಾಲೀಕರೊಬ್ಬರು ಕೋರ್ಟ್ ಮೊರೆ ಹೋಗಲು ಮುಂದಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ದಿ. ಚಾಮರಾಜ ಪಾಟೀಲ ಮಾಲೀಕತ್ವದ ಸರ್ವೇ ನಂಬರ್ ೨೩೯೬ರ ೩೮ ಗುಂಟೆ ನಿವೇಶನದಲ್ಲಿ ಎಸ್‌ಎಫ್‌ಸಿ, ೧೩ನೇ ಹಣಕಾಸು ಯೋಜನೆ, ಶಾಸಕ ಮತ್ತು ಸಂಸದರ ಅನುದಾನದಡಿ ಪುರಸಭೆ ಕಟ್ಟಡ ನಿರ್ಮಿಸಿದ್ದಾರೆ. ಇದೀಗ ನಮ್ಮ ಜಾಗವನ್ನು ಬಿಟ್ಟುಕೊಡುವಂತೆ ನಿವೇಶನ ಮಾಲೀಕರಾದ ಅರುಣ ಪಾಟೀಲ, ವಿನಯ ಪಾಟೀಲ ಆಗ್ರಹಿಸಿದ್ದಾರೆ. ಶಾಸಕ ಮತ್ತು ಸಂಸದರ ಅನುದಾನ ಬಿಡುಗಡೆಗೂ ಮುನ್ನ ನಿವೇಶನ ಪುರಸಭೆಯ ಆಸ್ತಿಯಾಗಬೇಕಿತ್ತು. ಪುರಸಭೆ ಸ್ವತ್ತಲ್ಲದ ನಿವೇಶನಕ್ಕೆ ಅನುದಾನ ಬಿಡುಗಡೆ ಆಗಿದ್ದಾದರೂ ಹೇಗೆ? ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಅಧಿಕಾರಿಗಳು ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸಿಕೊಂಡರೇ ? ಪುರಸಭೆ ಅಽಕಾರಿಗಳ ಅವೈಜ್ಞಾನಿಕ ಕೆಲಸದಿಂದಾಗಿ ಸಮಸ್ಯೆ ಉದ್ಭವಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಈಗಾಗಲೇ ದಿ. ಚಾಮರಾಜ ಪಾಟೀಲ ಪತ್ನಿ ಮಹಾದೇವಿ ಹಾಗೂ ಪುತ್ರರಾದ ಅರುಣ, ವಿನಯ ಪಾಟೀಲ ಹೆಸರು ದಾಖಲಾಗಿದೆ. ಈ ನಿವೇಶನ ಪಾಟೀಲರ ಕುಟುಂಬಕ್ಕೆ ಸೇರಿದೆ ಎಂಬ ವಾದವನ್ನು ಕುಟುಂಬದವರು ಮಂಡಿಸಿದ್ದು, ಪುರಸಭೆ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮತ್ತೊಂದೆಡೆ ಪುರಸಭೆ ಅಽಕಾರಿಗಳು ಎಲ್ಲ ಆಸ್ತಿಗಳ ದಾಖಲೆಗಳ ಪರಿಶೀಲನೆ ಕೆಲಸ ಆರಂಭಿಸಿದ್ದಾರೆ.

ಖಾಸಗಿ ಜಮೀನಿನಲ್ಲಿ ಅಕ್ರಮವಾಗಿ ಹುಕ್ಕೇರಿ ಪುರಸಭೆ ಕಟ್ಟಡ ನಿರ್ಮಿಸಲಾಗಿದೆ ಎಂಬ ವಿಷಯ ನನಗೂ ಗೊತ್ತಿರಲಿಲ್ಲ. ಈ ಕುರಿತು ದಾಖಲೆ ಸಮೇತ ತಿಳಿಸಬೇಕೆಂದು ಮುಖ್ಯಾಧಿಕಾರಿಗೆ ಸೂಚಿಸಿದ್ದೇನೆ. | ನಿಖಿಲ ಕತ್ತಿ ಹುಕ್ಕೇರಿ ಶಾಸಕ ಹುಕ್ಕೇರಿ ಪುರಸಭೆಗೆ ವರ್ಗಾವಣೆಯಾಗಿ ಬಂದು ಎರಡು ತಿಂಗಳಾಗಿದೆ. ಈ ವಿಷಯ ನನಗೆ ಗೊತ್ತಿಲ್ಲ. | ಈಶ್ವರ ಸಿದ್ನಾಳ ಮುಖ್ಯಾಧಿಕಾರಿ ಹುಕ್ಕೇರಿ ಪುರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net