

ಕಲಬುರಗಿ: ಶೈಕ್ಷಣಿಕ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತಂದಿರುವ ಖಾಸಗಿ ಶಿP್ಷÀಣ ಸಂಸ್ಥೆಗಳಿಗೆ ಅಗತ್ಯ ನೆರವು ನೀಡುವಂತೆ ವಿಧಾನಮಂಡಲ ಮಳೆಗಾಲ ಅಧಿವೇಶನದಲ್ಲಿ ಪ್ರಸ್ತಾಪಿಸುವೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಭರವಸೆ ನೀಡಿದರು.
ನಗರದ ಕನ್ನಡ ಭವನದ ಸುವರ್ಣಾ ಸಭಾ ಭವನದಲ್ಲಿ ಕಾಬಾ ಕೋಚಿಂಗ್ ಸೆಂಟರ್‌ನಿAದ ಇತ್ತೀಚೆಗೆ ಹಮ್ಮಿಕೊಂಡ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ರ‍್ಯಾಂಕ್ ಗಳಿಸಿದ ಸಾಧಕರಿಗೆ ಸನ್ಮಾನ ಹಾಗೂ ಟಾರ‍್ಸ್ ಟಾಕ್ ಶೋ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಶಿP್ಷÀಣಕ್ಕೆ ಒತ್ತು ನೀಡಬೇಕು ಎಂದರು.
ಶಿP್ಷÀಣ ತಜ್ಞ ಪ್ರೊ.ನರೇಂದ್ರ ಬಡಶೇಷಿ ಉಪನ್ಯಾಸ ನೀಡಿ, ಪಾಲಕರು ತಮ್ಮ ಅಭಿರುಚಿಯನ್ನು ಮಕ್ಕಳ ಮೇಲೆ ಹೇರಬಾರದು. ವಿದ್ಯಾರ್ಥಿಗಳು ಆಸಕ್ತ ಕ್ಷೇತ್ರದತ್ತ ನಿಗಾವಹಿಸಿ, ಶೈಕ್ಷಣಿಕ ವಾತಾವರಣ ಮನೆಯಲ್ಲಿ ಮೂಡಿಸಬೇಕು ಎಂದರು.
ರಾಜ್ಯ ಗಣಿತ ಸಂಪನ್ಮೂಲ ವ್ಯಕ್ತಿ, ಸಂಸ್ಥೆ ಮುಖ್ಯಸ್ಥ ಡಾ.ಅಶೋಕ ಕಾಬಾ ಚೇಂಗಟಾ ಮಾತನಾಡಿ, ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ರ‍್ಯಾಂಕ್ ಗಳಿಸುತ್ತಿರುವುದು ಹೆಮ್ಮೆಯ ಸಂಗತಿ. ವಿಶೇಷವಾಗಿ ಅಗ್ರ ೨೦ ರ‍್ಯಾಂಕ್‌ಗಳಲ್ಲಿ ಐದರೊಳಗೆ ರ‍್ಯಾಂಕ್ ಪಡೆದು ಸಂಸ್ಥೆ ಕೀರ್ತಿ ಹೆಚ್ಚಿಸಿದ್ದಾರೆ.
ಸಾಧಕರಿಗೆ ಸತ್ಕಾರ: ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿ ರಾಜ್ಯಕ್ಕೆ ರ‍್ಯಾಂಕ್ ಪಡೆದ ಗಂಗಾAಬಿಕಾ, ಸುಹಾಸ, ವಿನಾಯಕ ಠಾಕೂರ, ತ್ರಿಶಾ, ಶಶಾಂಕ, ಕನಿಕಾ, ಅಭಿನಯ, ಚಿನ್ಮಯಿ, ಮನೀಷಾ ಸೇರಿ ಹತ್ತಾರು ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಬಿಜಾಸಪುರ ಗ್ರೂಪ್ ಸಿಇಒ, ಸಿಎ ಪ್ರಶಾಂತ ಬಿಜಾಸಪುರ ಮಾತನಾಡಿದರು. ಡಾ.ಶರಣು ಕಾಶೀನಾಥ ಮೋತಕಪಲ್ಲಿ, ಡಾ.ಪ್ರಿಯಾ ಕೇಶ್ವಾರ, ಡಾ.ಸುಮಿತ್ ಕುಲಕರ್ಣಿ, ಡಾ.ವೇದಂತ, ಡಾ.ಗುಂಡುರೆಡ್ಡಿ, ಇಂಜಿನಿಯರ್‌ಗಳಾದ ಶ್ರದ್ಧಾ ಭುರ್ಕಪಲ್ಲಿ, ಮಲ್ಲಿಕಾರ್ಜುನ ಹಿರೇಮಠ, ಗೋಪಾಲರೆಡ್ಡಿ, ಅಖಿಲೇಶ ಮಸಳಿ ಅವರನ್ನು ಸನ್ಮಾನಿಸಲಾಯಿತು.
ಜೆಇಇ ಅಡ್ವಾನ್ಸ್ö್ಡ ಪರೀಕ್ಷೆಯಲ್ಲಿ ೧೭೩ನೇ ರ‍್ಯಾಂಕ್ ಪಡೆದ ಸುಮಿತ್ ರೆಡ್ಡಿ, ಕಾರ್ಯದರ್ಶಿ ರಾಜೇಶ್ವರಿ ಕಾಬಾ, ಹಣಮಂತರಾವ ಕಾಬಾ, ತಾಯಿ ಬಸಮ್ಮ ಕಾಬಾ, ಶಂಕರರಾವ ಕರಿ, ಚನ್ನಬಸಪ್ಪ ಕರಿ, ಗೌತಮ ಪಾಟೀಲ್, ಡಾ.ಸಿದ್ಧರಾಜ ಕೇಶ್ವಾರ, ವಿಶ್ವನಾಥ ಭುರಲಪಲ್ಲಿ, ಭವಾನಿಸಿಂಗ್ ಠಾಕೂರ, ದೇವಿಂದ್ರಪ್ಪ ಆವಂಟಿ, ಕಾಶೀನಾಥ ಮೋತಕಪಲ್ಲಿ ಇತರರಿದ್ದರು.