

ಚಿತ್ರದುರ್ಗ: ಖಾಸಗಿ ಶಾಲೆಗಳಲ್ಲಿ ದುಬಾರಿ ಶುಲ್ಕ ವಿಧಿಸಿ, ಪಾಲಕರನ್ನು ಆರ್ಥಿಕ ಶೋಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲೆಯ ಈಚಗಟ್ಟ ಗ್ರಾಮದಲ್ಲಿ ಬುಧವಾರ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಮುಖಂಡ ಈಚಘಟ್ಟ ಸಿದ್ಧವೀರಪ್ಪ ಜನಜಾಗೃತಿ ಅಭಿಯಾನ ನಡೆಸಿದರು.
ಮನೆ-ಮನೆಗೆ ತೆರಳಿ ಅರಿವು ಮೂಡಿಸುವುದರ ಜೊತೆಗೆ ಅಲ್ಲಲ್ಲಿ ಸಭೆಗಳನ್ನು ನಡೆಸಿ ಪಾಲಕರಲ್ಲಿ ಸರ್ಕಾರಿ ಶಾಲೆಯ ಮಹತ್ವ, ಅದರ ಉಳಿವಿಗಾಗಿ ಜನ ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಸ್ತುತ ನಗರ, ಪಟ್ಟಣ, ಗ್ರಾಮಗಳೆನ್ನದೆ ಎಲ್ಲೆಡೆ ಖಾಸಗಿ ಶಾಲೆಗಳ ದುರಾಡಳಿತ, ದುಬಾರಿ ಶುಲ್ಕ ವಸೂಲಾತಿಯ ಕ್ರಮಗಳಿಂದ ಹೊರಬರಬೇಕಿದೆ. ಇದಕ್ಕಾಗಿ ಪಾಲಕರು ಸರ್ಕಾರಿ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಸೇರಿಸಲು ಮುಂದಾಗಬೇಕು ಎಂದು ಪ್ರೇರೇಪಿಸಿದರು.