ಖಾಸಗಿ ಶಾಲೆ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನ

ydg8
ಶಹಾಪುರದಲ್ಲಿ ಖಾಸಗಿ ಶಾಲೆಗಳ ಒಕ್ಕೂಟ ಹಾಗೂ ಕೃಪಾ ಸಂಘಟನೆಯ ನೂತನ ಕಚೇರಿಯನ್ನು ಅಧ್ಯಕ್ಷ ಆರ್.ಚನ್ನಬಸ್ಸು ವನದುರ್ಗ ಉದ್ಘಾಟಿಸಿದರು. ತಿಮ್ಮಯ್ಯ ಪುರ್ಲೆ, ಮಲ್ಲಿಕಾರ್ಜುನ ಪೂಜಾರಿ, ಶರಣಪ್ಪ ದೇಸಾಯಿ ಇತರರಿದ್ದರು.
Published on

ಶಹಾಪುರ: ಖಾಸಗಿ ಶಾಲೆಯವರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕಂಡುಕೊಳ್ಳಲುಕಚೇರಿ ಆರಂಭಿಸಲಾಗಿದೆ. ತಾಲೂಕಿನ ಎಲ್ಲ ಖಾಸಗಿ ಶಾಲೆಗಳ ಯಾವುದೇ ಸಮಸ್ಯೆ ಇದ್ದರೂ ಇಲ್ಲಿಗೆ ಬಂದು ಹಂಚಿಕೊಳ್ಳಬಹುದಾಗಿದೆ ಎಂದು ಖಾಸಗಿ ಶಾಲಾ ಒಕ್ಕೂಟದ ಅಧ್ಯಕ್ಷ ಆರ್.ಚನ್ನÀಬಸ್ಸು ವನದುರ್ಗ ತಿಳಿಸಿದರು.

ನಗರದ ಸಿಬಿ ಕಮಾನ ಹತ್ತಿರ ತಾಲೂಕ ಖಾಸಗಿ ಶಾಲೆಗಳ ಒಕ್ಕೂಟದ ನೂತನ ಕಚೇರಿಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಇಲಾಖೆ ನಿಯಮಗಳೊಂದಿಗೆ ಶೈಕ್ಷಣಿಕ ಮಟ್ಟ ವೃದ್ಧಿಸಲು ಖಾಸಗಿ ಶಾಲಾ ಒಕ್ಕೂಟ ಜತೆಗಿರಲಿದೆ ಎಂದರು.

ಒಕ್ಕೂಟದ ಹಿರಿಯರಾದ ತಿಮ್ಮಯ್ಯ ಪುರ್ಲೆ ಮಾತನಾಡಿ, ಪ್ರತಿ ವರ್ಷ ಮಾನ್ಯತೆ ನವೀಕರಣ ಮಾಡಿಸುವುದರಿಂದ ಖಾಸಗಿ ಶಾಲೆಗಳಿಗೆ ತೊಂದರೆಯಾಗುತ್ತಿದೆ. ಅದನ್ನು 5 ಇಲ್ಲವೇ 10 ವರ್ಷಕ್ಕೊಮ್ಮೆ ಮಾನ್ಯತೆ ನವೀಕರಣ ಮಾಡಿಸುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ಶ್ರೀಶೈಲ ಹೊಸ್ಮನಿ, ಹೊನ್ನಪ್ಪ ಗಂಗನಾಳ ಮಾತನಾಡಿದರು. ಪ್ರಮುಖರಾದ ನಾಸಿರುದ್ದೀನ್À ಲಲೋಟಿ, ಮಲ್ಲಿಕಾರ್ಜುನ ಪೂಜಾರಿ, ಮಲ್ಲಿಕಾರ್ಜುನ ಕಂದಕೂರು,ಶರಣಪ್ಪ ದೇಸಾಯಿ, ಬಸವರಾಜ ಅರುಣಿ, ಮಲ್ಲಿಕಾರ್ಜುನ ಪಾಟೀಲ, ಅವಿನಾಶ ಸಿನ್ನೂರ, ಶೇಖರ ದೊರೆ, ಅಶೋಕ ಘನಾತೆ, ವಿ.ಸತ್ಯಂರೆಡ್ಡಿ, ಶಶಿ ಗೋಗಿ, ಮಹೇಶ ಸಗರ, ಚಂದ್ರು ಯಾದವ, ಶರಣಗೌಡ ಭೈರೆಡ್ಡಿ, ಅಶೋಕ ದಿನ್ನಿ, ಲೋಕೇಶ ಮೊದಲಾದವರಿದ್ದರು.ಶರಣು ಪಾಟೀಲ ಸ್ವಾಗತಿಸಿದರು.ರಾಮು ಸಗರ ನಿರೂಪಿಸಿದರು,ತಿಪ್ಪಣ್ಣ ಕ್ಯಾತನಾಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net