

ಚಿತ್ರದುರ್ಗ: ನಗರ ವ್ಯಾಪ್ತಿಯ ಖಾಲಿ ನಿವೇಶನಗಳಲ್ಲಿ ಪೊದೆ, ಗಿಡ ಬೆಳೆದಿವೆ. ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ಇದರಿಂದ ನಗರದ ಸೌಂದರ್ಯ ಹಾಳಾಗುತ್ತಿದೆ. ಅಲ್ಲದೆ, ವಿಷ ಜಂತುಗಳು ಸೇರಿ ಅನಾಹುತಕ್ಕೂ ಕಾರಣವಾಗಲಿದೆ. ಆದ್ದರಿಂದ ಸಂಬಂಧಿಸಿದ ಮಾಲೀಕರು ಸ್ವಚ್ಛಗೊಳಿಸಿ ಇಟ್ಟುಕೊಳ್ಳುವಂತೆ ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ ಮನವಿ ಮಾಡಿದ್ದಾರೆ.
15 ದಿನದೊಳಗೆ ಸ್ವಚ್ಛಗೊಳಿಸಿ, ತಡೆಗೋಡೆ ನಿರ್ಮಿಸಿ, ಮಾಲೀಕರ ಹೆಸರು, ವಿಳಾಸ, ಖಾತಾ-ಅಸೆಸ್‌ಮೆಂಟ್ ಸಂಖ್ಯೆ, ಅಳತೆ, ಪಿಐಡಿ ಹಾಗೂ ಮೊಬೈಲ್ ನಂಬರ್‌ವುಳ್ಳ ವಿವರದ ನಾಮಫಲಕ ಅಳವಡಿಸಿಕೊಂಡು ಬಂದೋಬಸ್ತ್ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಒಂದು ವೇಳೆ ಮಾಲೀಕರು ತಮ್ಮ ನಿವೇಶನಗಳ ಸ್ವಚ್ಛತೆಗೆ ಕ್ರಮವಹಿಸದಿದ್ದರೆ ನಗರಸಭೆಯಿಂದಲೇ ಕಾರ್ಯೋನ್ಮುಖರಾಗಿ ಅದಕ್ಕೆ ತಗಲುವ ವೆಚ್ಚ, ದಂಡ ಸಮೇತ ವಸೂಲಿ ಮಾಡಲಾಗುವುದು. ಇದಕ್ಕೆ ಸ್ಪಂದಿಸದಿದ್ದರೆ, ಖಾತಾ, ಇ-ಸ್ವತ್ತು ನೀಡಲಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.