ಖಾಲಿ ನಿವೇಶನ ಸ್ವಚ್ಛತೆಗೆ ಸೂಚನೆ

PHOTO-3--03
Published on


ಚಿತ್ರದುರ್ಗ:ನಗರದಲ್ಲಿರುವ ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ನಗರಸಭೆ ಆಯುಕ್ತೆ ಎಂ.ರೇಣುಕಾ ಅವರು ನಿವೇಶ ನಗಳ ಮಾಲೀಕರಿಗೆ ಸೂಚಿಸಿದ್ದಾರೆ. ಫೆನ್ಸಿಂಗ್/ಕಾಂಪೌಂಡ್‌ನೊಂದಿಗೆ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಕೊಳ್ಳಬೇಕು. ಖಾಲಿ ನಿವೇಶಗಳಲ್ಲಿ ತ್ಯಾಜ್ಯಅಧಿಕವಾಗುತ್ತಿದೆ. ಇದರೊಂದಿಗೆ ಈ ನಿವೇಶನಗಳು ಬಿಡಾಡಿ ದನ,ಹಂದಿ,ನಾಯಿಗಳ ಹಾಗೂ ವಿಷಜಂತುಗಳ ವಾಸ ಸ್ಥಾನವಾಗಿವೆ.ಸಾಂ ಕ್ರಾಮಿಕ ರೋಗಗಳು ಹರಡುವ ಭೀತಿಯೂ ಇದೆ. ಆದ್ದರಿಂದ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದೆಂದು ಅವರು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net