

ಚಿತ್ರದುರ್ಗ: ನಗರ ವ್ಯಾಪ್ತಿಯಲ್ಲಿರುವ ತಮ್ಮ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವಂತೆ ನಗರಸಭೆ ಪೌ ರಾಯುಕ್ತೆ ಎಂ.ರೇಣುಕಾ ಅ ವರು ನಿವೇಶನ ಮಾಲೀಕರಿಗೆ ಸೂಚಿಸಿದ್ದಾರೆ. ಖಾಲಿ ನಿವೇಶಗಳ ಸ್ವಚ್ಛತೆಗೆ ಅನೇಕ ಕಾರ‌್ಯಕ್ರಮಗಳನ್ನು ನಡೆಸಲಾಗಿದ್ದರೂ, ಮತ್ತೆ ಅವುಗಳಲ್ಲಿ ಗಿಡ ಗಂಟೆ ಬೆಳೆದಿದ್ದು,ವಿಷಜಂತುಗಳು ಕಾಣಿಸುತ್ತಿವೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಮಾಲೀಕರ ಮಾಹಿತಿ ಲಭ್ಯವಿದ್ದವರಿಗೆ ನೋಟೀಸ್ ಸ್ವಚ್ಛತೆಗೆ ತಿಳಿಸಲಾಗಿದೆ. ಹಲವರ ವಿಳಾಸ ಲಭ್ಯವಾಗಿಲ್ಲ. ನಿವೇಶನ ಸ್ವಚ್ಛಗೊಳಿಸಿ, ಕಾ ಂಪೌಡ್ ನಿರ್ಮಿಸಬೇಕು. ಮಾಲೀಕರ ಹೆಸರು,ವಿಳಾಸ, ಖಾತೆ ಅಥವಾ ಅಸೆಸ್‌ಮೆಂಟ್ ಸಂಖ್ಯೆ,ಪಿಐಡಿನಂ ಹಾಗೂ ಮೊಬೈಲ್ ನಂಬರ್ ವಿರುವ ನಾಮಫಲಕ ಅಳವಡಿಸಬೇಕು. ಈ ನಿಟ್ಟಿನಲ್ಲಿ ಕ್ರಮ ವಹಿಸದಿದ್ದರೆ ಸ್ವಚ್ಛತೆಯ ದುಪ್ಪಪಟ್ಟು ವೆಚ್ಚವನ್ನು ದಂಡವನ್ನಾಗಿ ವಸೂಲಿ ಮಾ ಡಲಾಗುವುದೆಂದು ಅವರು ಎಚ್ಚರಿಸಿದ್ದಾರೆ.