ಖಾರದ ಪುಡಿಯೊಂದಿಗೆ ಕೋರ್ಟ್​ಗೆ ಬಂದ ಕೈದಿ!

H4 Kharada pudi 1
Published on

ಹುಬ್ಬಳ್ಳಿ: ಮನೆಗಳ್ಳತನ ಪ್ರಕರಣದಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹ ಸೇರಿರುವ ಕೈದಿಯೊಬ್ಬ ವಿಚಾರಣೆಗೆಂದು ಬುಧವಾರ ಹುಬ್ಬಳ್ಳಿಯ

ಕೋರ್ಟ್​ಗೆ ಆಗಮಿಸಿದ್ದ ವೇಳೆ ಖಾರದ ಪುಡಿ ಹಾಗೂ ಬೆಂಕಿ ಪೊಟ್ಟಣ ಇಟ್ಟುಕೊಂಡು ಆತಂಕ ಸೃಷ್ಟಿಸಿದ್ದ.

ಹಾವೇರಿ ಜಿಲ್ಲೆ ಹಾನಗಲ್ ಮೂಲದ ನಾಗರಾಜ ಹರಿಜನ ಕೋರ್ಟ್​ಗೆ ಖಾರದ ಪುಡಿ, ಬೆಂಕಿ ಪೊಟ್ಟಣ ತೆಗೆದುಕೊಂಡು ಬಂದಿದ್ದ ಆರೋಪಿ.

ಹಾವೇರಿ ಶಹರ ಠಾಣೆ ವ್ಯಾಪ್ತಿಯಲ್ಲಿ ಮನೆಗಳ್ಳತನ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ನಾಗರಾಜನನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಮನೆಗಳ್ಳತನ ಪ್ರಕರಣದ ವಿಚಾರಣೆಗೆಂದು ಹುಬ್ಬಳ್ಳಿ ಕಸಬಾಪೇಟ ಠಾಣೆ ಪೊಲೀಸರು ಬುಧವಾರ ನ್ಯಾಯಾಲಯಕ್ಕೆ ಕರೆತಂದಿದ್ದರು. ಕೋರ್ಟ್​ನ ಭದ್ರತಾ ಸಿಬ್ಬಂದಿ ತಪಾಸಣೆ ಮಾಡುವ ವೇಳೆ ಆರೋಪಿ ಬಳಿ ಖಾರದ ಪುಡಿ, ಬೆಂಕಿ ಪೊಟ್ಟಣ ಪತ್ತೆಯಾಗಿದೆ. ಆತನನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ.

ನ್ಯಾಯಾಲಯದ ಭದ್ರತಾ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಸಂಭವನೀಯ ಅನಾಹುತ ತಪ್ಪಿದಂತಾಗಿದೆ. ಭದ್ರತಾ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಬಳ್ಳಾರಿ ಜೈಲಿನಲ್ಲಿ ಖಾರದಪುಡಿ ಹೇಗೆ ಬಂತು ?: ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದ ನಾಗರಾಜನ ಕೈಯಲ್ಲಿ ಖಾರದ ಪುಡಿ ಹಾಗೂ ಬೆಂಕಿ ಪೊಟ್ಟಣ ಹೇಗೆ ಬಂತು ? ಇದರಲ್ಲಿ ಜೈಲಿನ ಅಧಿಕಾರಿ, ಸಿಬ್ಬಂದಿ ಕೈವಾಡ ಇದೆಯಾ ? ಭದ್ರತಾ ವೈಫಲ್ಯ ಕಾರಣವೇ ? ಯಾವ ಕಾರಣಕ್ಕಾಗಿ ಕೋರ್ಟ್​ಗೆ ಆ ವಸ್ತುಗಳನ್ನು ತಂದಿದ್ದ ? ಎಂಬ ಕುರಿತು ತನಿಖೆಯಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net