ಖಾನಾಪುರಲ್ಲಿ ಚಿನ್ನಾಭರಣ ಕಳ್ಳತನ ಹೆಚ್ಚಳ

This is masked man robber with stolen gold.
This is masked man robber with stolen gold.
Published on

ಖಾನಾಪುರ: ಪಟ್ಟಣದಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದು, ಬಸ್​ ನಿಲ್ದಾಣದಲ್ಲಿ ಭಾನುವಾರ ಮಹಿಳೆಯ ಎಂಟು ತೊಲ ಚಿನ್ನಾಭರಣವನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ತಾಲೂಕಿನ ಓಲ್ಮಾನಿಯ ಪ್ರಜ್ಞಾ ಪರುಶುರಾಮ ಚವ್ಹಾಣ ಅವರು ಬೆಳಗಾವಿಯಿಂದ ಪ್ರಯಾಣಿಸಿ ಖಾನಾಪುರ ಬಸ್​ ನಿಲ್ದಾಣದಲ್ಲಿ ಬಸ್​ ಇಳಿಯುತ್ತಿದ್ದ ವೇಳೆ ಅವರ ಬ್ಯಾಗ್​ನಿಂದ ಚಿನ್ನಾಭರಣ ದೋಚಲಾಗಿದೆ. ಅಲ್ಲದೆ ಕಳೆದ ಶುಕ್ರವಾರ ಖಾನಾಪುರ ಬಸ್​ ನಿಲ್ದಾಣದಲ್ಲಿ ಸಣ್ಣಹೊಸೂರಿನ ಮಹಿಳೆ ಸವಿತಾ ಈರಪ್ಪ ಪಾಟೀಲಲೆಂಬುವರು ಬಸ್​ ಹತ್ತುತ್ತಿದ್ದ ವೇಳೆ ನಾಲ್ಕೂವರೆ ತೊಲ ಚಿನ್ನಾಭರಣ ಕಳವು ಮಾಡಲಾಗಿದೆ. ಖಾನಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net